ಬಾವಿಗೆ ಬಿದ್ದ ಟ್ರ್ಯಾಕ್ಟರ್​! ಈಜಿಕೊಂಡು ಮೇಲೆ ಬಂದ ಓರ್ವ, ಮತ್ತೊಬ್ಬ ನಾಪತ್ತೆ

New Project (2)
Published on

ಬಾಗಲಕೋಟೆ: ಕಬ್ಬು ತುಂಬಿಕೊಂಡು ಹೋಗಲೆಂದು ಬರುತ್ತಿದ್ದ ಟ್ರ್ಯಾಕ್ಟರ್​ ತೆರೆದ ಬಾವಿಗೆ ಬಿದ್ದ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಕಂದಗಲ್​ನಲ್ಲಿ ಸಂಭವಿಸಿದೆ.

ಕಂದಗಲ್ ಗ್ರಾಮದ ತೋಟವೊಂದರಲ್ಲಿ ಕಬ್ಬು ಕಟಾವು ಮಾಡಲಾಗಿತ್ತು. ಟ್ರ್ಯಾಕ್ಟರ್​ನ ಟ್ರೇಲರ್​ಗೆ ತುಂಬಿದ್ದ ಕಬ್ಬನ್ನು ಟ್ರ್ಯಾಕ್ಟರ್ ಎಂಜಿನ್ ತೆಗೆದುಕೊಂಡು ಕಾರ್ಮಿಕರಿಬ್ಬರು ಬರುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ತೋಟದಲ್ಲಿದ್ದ ತೆರೆದ ದೊಡ್ಡ ಬಾವಿಗೆ ಟ್ರ್ಯಾಕ್ಟರ್ ಬಿದ್ದಿದೆ. ಟ್ರ್ಯಾಕ್ಟರ್​ನಲ್ಲಿ ಇದ್ದ ಇಬ್ಬರೂ ಬಾವಿಗೆ ಬಿದ್ದಿದ್ದು, ಆ ಪೈಕಿ ಓರ್ವ ಈಜಿಕೊಂಡು ಮೇಲೆ ಬಂದಿದ್ದಾನೆ. ಮತ್ತೊಬ್ಬ ಬಾವಿಯ ನೀರಲ್ಲಿ ಕಣ್ಮರೆಯಾಗಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಬಾವಿಯಲ್ಲಿ ಕಾಣೆ ಆಗಿರುವ ವ್ಯಕ್ತಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net