ಮದ್ವೆ ದಿಬ್ಬಣದ ಟ್ರ್ಯಾಕ್ಟರ್​ ಚಲಾಯಿಸಿದ ರೇಣುಕಾಚಾರ್ಯ! ಹೋದ ಕಡೆಯಲ್ಲೆಲ್ಲ ಗಮನ ಸೆಳೆಯುವ ಶಾಸಕ

renukacharya
Published on

ದಾವಣಗೆರೆ: ಮೂರ್ನಾಲ್ಕು ದಿನದ ಹಿಂದೆ ಮದ್ವೆ ಮನೆಯಲ್ಲಿ ಕರಿಮಣಿ ಪೋಣಿಸುವ ಮೂಲಕ ಗಮನ ಸೆಳೆದಿದ್ದ ಶಾಸಕ ಎಂ.ಪಿ. ರೇಣುಕಾಚಾರ್ಯ, ಇದೀಗ ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದಲ್ಲಿ ದಿಬ್ಬಣದ ಟ್ರ್ಯಾಕ್ಟರ್​ ಚಲಾಯಿಸುವ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ.

ಪಕ್ಷದ ಕಾರ್ಯಕರ್ತ ಬೆಳಗುತ್ತಿ ಗ್ರಾಮದ ಮಲ್ಲಿಕಾರ್ಜುನ ಅಪ್ಪನವರ ಪುತ್ರ ಪ್ರಶಾಂತ್​ ಹಾಗೂ ಪ್ರಿಯಾ ಅವರ ಮದುವೆಯಲ್ಲಿ ಪಾಲ್ಗೊಂಡಿದ್ದ ಶಾಸಕರು ಭಾನುವಾರ ರಾತ್ರಿ ದಿಬ್ಬಣ ಹೊತ್ತ ಟ್ರ್ಯಾಕ್ಟರ್​ ಏರಿದರು. ಸುಮಾರು ಒಂದು ಕಿ.ಮೀ. ವರೆಗೂ ಸಾಗಿದ ಅವರು ಮದುವೆ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸುತ್ತಿದ್ದವರಿಗೆ ಹುರುಪು ತುಂಬಿದರು. ಈ ಮೂಲಕ ನವಜೋಡಿಗೆ ಆಶೀರ್ವದಿಸಿದರು. ರೇಣುಕಾಚಾರ್ಯರು ಎಲ್ಲೆ ಹೋದರೂ ಜನರೊಂದಿಗೆ ಬೆರೆಯುವ ಮೂಲಕ ಗಮನ ಸೆಳೆಯುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net