

ಆನೇಕಲ್: ಬೆಂಗಳೂರು ಹೊರವಲಯದಲ್ಲಿ ನಿನ್ನೆ(ಗುರುವಾರ) ಯುವಕರಿಬ್ಬರ ಜೋಡಿ ಕೊಲೆಯಾಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಅತ್ತಿಬೆಲೆ ನಿವಾಸಿ ದೀಪಕ್ ಮತ್ತು ಮಾಯಸಂದ್ರ ನಿವಾಸಿ ಭಾಸ್ಕರ್ ಕೊಲೆಯಾದ ಯುವಕರು. ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪದ ಟಿವಿಎಸ್ ರಸ್ತೆಯ ನಿರ್ಜನ ಪ್ರದೇಶದಲ್ಲಿ ದುಷ್ಕರ್ಮಿಗಳ ತಂಡ ಇಬ್ಬರನ್ನು ಬರ್ಬರವಾಗಿ ಕೊಂದು ಪರಾರಿಯಾಗಿದೆ.
ಗುರುವಾರ ರಾತ್ರಿ 8ರಿಂದ 9 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದ್ದು, ಹಣಕಾಸು ವಿಚಾರಕ್ಕೆ ಕೊಲೆ ನಡೆದಿರುವ ಸಾಧ್ಯತೆ ಇದೆ. ಪಲ್ಸರ್ ಹಾಗೂ ಹೀರೋ ಎಕ್ಸ್ಟ್ರೀಮ್ ಬೈಕ್ನಲ್ಲಿ ಹೋಗುತ್ತಿದ್ದ ಭಾಸ್ಕರ್ ಮತ್ತು ದೀಪಕ್ನನ್ನು ಅಡ್ಡಗಟ್ಟಿ ಅವರ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಂದಿದ್ದಾರೆ. ಸ್ಥಳಕ್ಕೆ ಎಸ್ಪಿ ವಂಶಿ ಕೃಷ್ಣ ಹಾಗೂ ಡಿವೈಎಸ್ಪಿ ಮಲ್ಲೇಶ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರವು ಎಂಬಾತನೇ ಕೊಲೆ ಮಾಡಿದ್ದಾನೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ತಮಿಳುನಾಡು ಮೂಲದ ಅರುವು ಅತ್ತಿಬೆಲೆಯಲ್ಲಿ ವಾಸವಿದ್ದ.