

ಕಲಾದಗಿ: ಸಮೀಪದ ಖ್ಯಾತ ಧಾರ್ಮಿಕ ಕ್ಷೇತ್ರ ತುಳಸಿಗೇರಿಯ ಶ್ರೀ ಮಾರುತೇಶ್ವರ ದೇವರ ದೇವಸ್ಥಾನದಲ್ಲಿನ ಹುಂಡಿಗಳಲ್ಲಿನ ಹಣ ಎಣಿಕೆ ಕಾರ್ಯ ಶುಕ್ರವಾರ ನಡೆದಿದ್ದು, ಒಟ್ಟು 16,09,332 ರೂಗಳ ಸಂಗ್ರಹವಾಗಿದೆ.
ಬಾಗಲಕೋಟೆ ತಾಲೂಕು ತಹಸೀಲ್ದಾರ್ ಹಾಗೂ ದೇವಾಲಯದ ಆಡಳಿತಾಧಿಕಾರಿಗಳೂ ಆದ ಅಮರೇಶ ಪಮ್ಮಾರ ಉಪಸ್ಥಿತಿಯಲ್ಲಿ ಬೆಳಗ್ಗೆಯಿಂದ ಸಂಜೆ ಏಳು ಗಂಟೆಯವರೆಗೂ ದೇವಾಲಯದಲ್ಲಿ ಐದು ಹುಂಡಿಗಳನ್ನು ತೆಗೆದು ಹಣ ಎನಿಸಲಾಯಿತು.
ತಾಲೂಕು ಕಚೇರಿಯ ಶಿರಸ್ತೇದಾರ ನಾಗರಾಜ ಕುಲಕರ್ಣಿ, ಡಿ.ಐ. ನಿಲುಗಲ್, ಉಪತಹಸೀಲ್ದಾರ್ ಆರ್.ಆರ್. ಕುಲಕರ್ಣಿ, ಕಂದಾಯ ನಿರೀಕ್ಷಕ ಎಂ.ಕೆ. ಹಿರೇಮಠ, ತುಳಸಿಗೇರಿ ಗ್ರಾಮ ಆಡಳಿತಾಧಿಕಾರಿ ವಿಜಯಲಕ್ಷ್ಮೀ ನಾಯ್ಕರ್, ಕಲಾದಗಿ ವಲಯದ ಗ್ರಾಮ ಆಡಳಿತಾಧಿಕಾರಿಗಳಾದ ರವಿಕುಮಾರ ಕುಳ್ಳೊಳ್ಳಿ, ಶ್ರೀಕಾಂತ ಪಾಟೀಲ, ವಿಜಯಕುಮಾರ ದೇಶಮಾನೆ, ರವಿ ಚಲವಾದಿ, ಸಂಜಿವಕುಮಾರ ಕೊಳ್ಳಿ ಸೇರಿ ತಹಸೀಲ್ದಾರ್ ಕಾರ್ಯಾಲಯ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿದ್ದರು.
ಕಳೆದ ವರ್ಷದ ಜೂನ್‌ನಲ್ಲಿ ಹುಂಡಿ ಹಣ ಎಣಿಕೆ ಮಾಡಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.