ಜಿಲ್ಲೆಯಲಿ 218 ಜನರಿಗೆ ಕೋವಿಡ್

Published on


ವಿಜಯವಾಣಿ ಸುದ್ದಿಜಾಲ ಹಾಸನ
ಜಿಲ್ಲೆಯಲ್ಲಿ ಗುರುವಾರ 218 ಕೋವಿಡ್-19 ಪ್ರಕರಣ ವರದಿಯಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ 9 ಜನರು ಮೃತಪಟ್ಟಿದ್ದಾರೆ.
ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 10878ಕ್ಕೆ ಏರಿಕೆಯಾಗಿದ್ದು ಇದುವರೆಗೆ 241 ಜನರು ಸಾವಿಗೀಡಾಗಿದ್ದಾರೆ. 7718 ಜನ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದು, 2919 ಸಕ್ರಿಯ ಪ್ರಕರಣಗಳಿವೆ. 50 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಸದಾಗಿ ಆಲೂರಿನ 17, ಅರಕಲಗೂಡು 7, ಅರಸೀಕೆರೆ 23, ಬೇಲೂರು 6, ಚನ್ನರಾಯಪಟ್ಟಣ 20, ಹಾಸನ 113, ಹೊಳೆನರಸೀಪುರ 17, ಸಕಲೇಶಪುರ ತಾಲೂಕಿನ 14 ಹಾಗೂ ಹೊರ ಜಿಲ್ಲೆಯ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ.
ಹಾಸನ ತಾಲೂಕಿನ 25, 72, 75, 65 ಪುರುಷರು, 58 ಹಾಗೂ 49 ವರ್ಷದ ಮಹಿಳೆಯರು, ಹೊಳೆನರಸೀಪುರದ 58 ವರ್ಷದ ವ್ಯಕ್ತಿ, ಬೇಲೂರಿನ 58 ವಯೋಮಾನದ ಮಹಿಳೆ ಹಾಗೂ ಅರಸೀಕೆರೆಯ 80 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ಸತೀಶ್‌ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net