ಪೊಲೀಸ್​ ಜೀಪ್​ ಮೇಲೆ ಮರಳು ತುಂಬಿದ್ದ ಟಿಪ್ಪರ್ ಲಾರಿ ಪಲ್ಟಿ: ಸ್ಥಳದಲ್ಲೇ ಪೇದೆ ಸಾವು

police death
Published on

ಮೈಸೂರು: ಸಾವು ಯಾವ ಕ್ಷಣದಲ್ಲಾದರೂ ಬರಬಹುದು ಎಂಬುದಕ್ಕೆ ಈ ಘಟನೆಯೇ ನಿದರ್ಶನ. ವಾಹನ ತಪಾಸಣೆ ವೇಳೆ ರಸ್ತೆಬದಿ ನಿಂತಿದ್ದ ಪೊಲೀಸ್​ ಜೀಪ್​ ಮೇಲೆ ಎಂ ಸ್ಯಾಂಡ್​ ಮರಳು ತುಂಬಿದ್ದ ಟಿಪ್ಪರ್ ಪಲ್ಟಿಯಾಗಿದ್ದು, ಜೀಪ್​ನಲ್ಲಿದ್ದ ಮುಖ್ಯ ಪೇದೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಇಂತಹ ದುರ್ಘಟನೆ ನಂಜನಗೂಡಿನ ಮುದ್ದಹಳ್ಳಿ ಗೇಟ್​ ಬಳಿ ಸಂಭವಿಸಿದೆ. ಸಿದ್ದರಾಜನಾಯಕ (35) ಮೃತಪಟ್ಟ ದುರ್ದೈವಿ. ಮುದ್ದಹಳ್ಳಿ ಗೇಟ್ ಬಳಿ ಇನ್​ಸ್ಪೆಕ್ಟರ್​ ನೇತೃತ್ವದ ತಂಡ ವಾಹನ ತಪಾಸಣೆ ಕಾರ್ಯಾಚರಣೆ ಮಾಡುತ್ತಿತ್ತು. ಈ ವೇಳೆ ಮರಳು ಸಾಗಣೆ ಮಾಡುತ್ತಿದ್ದ ಟಿಪ್ಪರ್ ಬಂದಿದ್ದು, ನಿಲ್ಲಿಸುವಂತೆ ಪೊಲೀಸ್​ ಸಿಬ್ಬಂದಿ ಸೂಚಿಸಿದ್ದಾರೆ. ವಾಹನ ನಿಲ್ಲಿಸುವಾಗ ಚಾಲಕನ ನಿಯಂತ್ರಣ ಕಳೆದುಕೊಂಡ ಟಿಪ್ಪರ್​ ಟಿಪ್ಪರ್ ಪೊಲೀಸ್​ ಜೀಪ್​ ಮೇಲೆ ಮಗುಚಿಬಿದ್ದಿದ್ದು, ಜೀಪ್​ನಲ್ಲಿ ಕುಳಿತಿದ್ದ ಮುಖ್ಯಪೇದೆ ಸಿದ್ದರಾಜನಾಯಕ ಜೀವಂತ ಸಮಾಧಿಯಾದರು. ಇದನ್ನೂ ಓದಿರಿ ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ

ಟಿಪ್ಪರ್​ನಿಂದ ಜೀಪ್​ ಮೇಲೆ ಬಿದ್ದಿದ್ದ ಮರಳನ್ನು ಕೂಡಲೇ ಸ್ಥಳೀಯರು ತೆರವು ಮಾಡಿ ಪೊಲೀಸ್​ ಪೇದೆಯನ್ನ ಉಳಿಸಿಕೊಳ್ಳಲು ಯತ್ನಿಸಿದ್ದರಾದರೂ ಫಲಿಸಲಿಲ್ಲ. ಜೆಸಿಬಿ ಮೂಲಕ ಮರಲು ತೆರವುಗೊಳಿಸಿ, ಟಿಪ್ಪರ್ ವಾಹನವನ್ನು ಪಕ್ಕಕ್ಕೆ ನಿಲ್ಲಿಸಲಾಯಿತು. ಬಳಿಕ ಪೇದೆಯ ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.

ಅಪಘಾತದಲ್ಲಿ ಪೊಲೀಸ್ ವಾಹನ ಜಖಂಗೊಂಡಿದೆ. ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net