

ಮಂಡ್ಯ: ಶಾಲೆಗೆ ಹೋಗುತ್ತಿದ್ದ ಬಾಲಕನ ಪ್ರಾಣವನ್ನು ಟಿಪ್ಪರ್ ರೂಪದಲ್ಲಿ ಬಂದ ಜವರಾಯ ಹೊತ್ತೊಯ್ದ ದುರ್ಘಟನೆ ಮದ್ದೂರು ತಾಲೂಕಿನ ಅಡಿಗನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಮಧುಸೂದನ್(8) ಮೃತ ದುರ್ದೈವಿ. ಮಂಗಳವಾರ ಬೆಳಗ್ಗೆ ಶಾಲೆಗೆಂದು ಮನೆಯಿಂದ ಬಾಲಕ ಹೋಗುತ್ತಿದ್ದ. ಇದೇ ವೇಳೆ ಹೆದ್ದಾರಿ ಕಾಮಗಾರಿಗೆ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಬಾಲಕನಿಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಬಾಲಕ ಮೃತಪಟ್ಟಿದ್ದಾನೆ. ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.
ಅಪಘಾತಕ್ಕೀಡಾದ ಟಿಪ್ಪರ್ ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣದ ಟೆಂಡರ್ ಪಡೆದಿರುವ ಡಿಬಿಎಲ್ ಕಂಪನಿಗೆ ಸೇರಿದೆ. ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.