ಗುಂಡ್ಲುಪೇಟೆ: ಪರವಾನಗಿ ಇಲ್ಲದೆ ಅಧಿಕ ತೂಕದ ಕಲ್ಲು ಸಾಗಣೆ ಮಾಡುತ್ತಿದ್ದ ಟಿಪ್ಪರನ್ನು ಗಣಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ತಾಲೂಕಿನ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ನಿಲ್ಲಿಸಿದ್ದಾರೆ. ಗಣಿ ಇಲಾಖೆ ವಿಧಿಸುವ ದಂಡ ಪಾವತಿಸಿದ ನಂತರ ಟಿಪ್ಪರ್ ಬಿಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.