ಹೃದಯಕ್ಕೆ ತಟ್ಟುವ ಚುಟುಕಿನ ಭಾವನೆ

nrp chutuku
ಎನ್.ಆರ್.ಪುರ ತಾಲೂಕು ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕಸಾಪ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮ ಆರ್.ವೆಂಕಟರಮಣಯ್ಯ ಉದ್ಘಾಟಿಸಿದರು. ಕೊನೋಡಿ ಗಣೇಶ್, ಎಚ್.ಎಸ್.ಪೂರ್ಣೇಶ್, ಮಂಜುನಾಥ್, ರಂಗಿಣಿ ಯು. ರಾವ್, ದಿವಾಕರ್, ಸಿದ್ದಪ್ಪಗೌಡ, ಎಸ್.ಉಪೇಂದ್ರ, ಸದಾಶಿವ, ಸುಧಾ, ದರ್ಶನ್ ಇದ್ದರು.
Published on

ಎನ್.ಆರ್.ಪುರ: ಚುಟುಕು ಓದಿದರೆ ಅದರ ಭಾವನೆ ಹೃದಯಕ್ಕೆ ತಟ್ಟುತ್ತದೆ ಎಂದು ಚುಟುಕು ಕವಿ ಕೊನೋಡಿ ಗಣೇಶ್ ಹೇಳಿದರು.

ಶನಿವಾರ ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಕಸಾಪ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮದಡಿ ಮಕ್ಕಳಿಗೆ ರಸಪ್ರಶ್ನೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಹನಿಗವನಗಳ ಮೂಲಕ ಸಾಮಾಜಿಕ ಕಳಕಳಿ ಎಂಬ ವಿಷಯದ ಕುರಿತು ಮಾತನಾಡಿದರು.
ಚುಟುಕುಗಳಿಗೆ ಯಾವುದೇ ಬೇಲಿ ಇಲ್ಲ. ಮೌಲ್ಯಯುತ ಜೀವನ ಕಲಿಸಿಕೊಡುತ್ತದೆ. ಸಣ್ಣ ಚುಟುಕು ಸಮಾಜಕ್ಕೆ ದೊಡ್ಡ ಸಂದೇಶ ನೀಡುತ್ತದೆ. ಚುಟುಕು ಕವಿ ದಿನಕರ ದೇಸಾಯಿ 1500 ಚುಟುಕುಗಳ ಪುಸ್ತಕ ಬರೆದಿದ್ದಾರೆ. ಚುಟುಕು ಎನ್ನುವುದು ಕನ್ನಡ ಭಗವದ್ಗೀತೆಯಂತೆ ಎಂದು ಬಣ್ಣಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತನ್ನು ಗ್ರಾಮೀಣ ಭಾಗಕ್ಕೆ ಕೊಂಡೊಯ್ಯುತ್ತಿದ್ದೇವೆ. ಹಳ್ಳಿಗಳಲ್ಲಿ ಕನ್ನಡ ಡಿಂಡಿಮ ಬಾರಿಸುತ್ತಿದ್ದೇವೆ. ಗ್ರಾಮೀಣ ಭಾಗದಲ್ಲಿರುವ ಜಾನಪದ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಗಾದೆ, ಒಗಟು, ಜಾನಪದ ಗೀತೆ ಸ್ಪರ್ಧೆಗಳನ್ನು ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಹೋಬಳಿ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದರು.
ಬೆಳ್ಳೂರು ಸರ್ಕಾರಿ ಪ್ರೌಢಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ವೆಂಕಟರಮಣಯ್ಯ ಮಾತನಾಡಿ, ಕಸಾಪ ರಾಜ್ಯ ಹಾಗೂ ಜಿಲ್ಲೆಗೆ ಸೀಮಿತವಾಗಿತ್ತು. ಈಗ ಗ್ರಾಮಗಳಲ್ಲೂ ಕನ್ನಡ ಭಾಷೆಗೆ ಸಂಬಂಧಪಟ್ಟ ಕಾರ್ಯಕ್ರಮ ಆಯೋಜಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಮುಂದಿನ ದಿನಗಳಲ್ಲೂ ಕಸಾಪ ಕಾರ್ಯಕ್ರಮಕ್ಕೆ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಶಿಕ್ಷಕ ಮಂಜುನಾಥ್ ಮಾತನಾಡಿ, ಕನ್ನಡದ ಮೊದಲ ಶಾಸನ ಹಲ್ಮಿಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ ಎಂಬುದು ನಮಗೆ ಹೆಮ್ಮೆಯಾಗಿದೆ. ಹೊಯ್ಸಳರ ಮೂಲ ಊರು ಮೂಡಿಗೆರೆ ತಾಲೂಕು. ಕುವೆಂಪು ಜನಿಸಿದ ಕೊಪ್ಪ ತಾಲೂಕು ಸಮೀಪದ ಕುಪ್ಪಳ್ಳಿಯಲ್ಲಿ ಎಂಬುದು ಜಿಲ್ಲೆಗೆ ಹೆಮ್ಮೆ ವಿಷಯ ಎಂದರು.
ಹಿರಿಯ ಆರೋಗ್ಯ ನಿರೀಕ್ಷಿಕ ದರ್ಶನ್ ಡೆಂೆ ಜ್ವರ ಹಾಗೂ ಹದಿಹರೆಯದ ಸಮಸ್ಯೆ ಕುರಿತು ಮಾತನಾಡಿದರು. ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 125ಕ್ಕೆ 121 ಅಂಕ ಪಡೆದ ಶ್ರೀನಿಧಿಯನ್ನು ಪುರಸ್ಕರಿಸಲಾಯಿತು.
ಗ್ರಾಪಂ ಸದಸ್ಯರಾದ ಎಚ್.ಇ.ದಿವಾಕರ, ಸಿದ್ದಪ್ಪಗೌಡ, ಎಸ್.ಉಪೇಂದ್ರ, ಎಸ್‌ಡಿಎಂಸಿ ಸದಸ್ಯ ಸದಾಶಿವ, ಮುಖ್ಯಶಿಕ್ಷಕಿ ಸುಧಾ, ತಾಲೂಕು ಕಸಾಪ ಸಾಂಸ್ಕೃತಿಕ ರಾಯಬಾರಿ ರಂಗಿಣಿ ಯು. ರಾವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net