

ನಾಲತವಾಡ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಬೀಸಿದ ಬಿರುಗಾಳಿ ರಭಸಕ್ಕೆ ಪಟ್ಟಣದ ಕೆಲ ಅಂಗಡಿ ಮುಂಗಟ್ಟುಗಳ ಮೇಲ್ಛಾವಣಿ ತಗಡುಗಳು ಹಾರಿಹೋಗಿವೆ.
ಪಟ್ಟಣವೆಲ್ಲ ಬಹುತೇಕ ಧೂಳುಮಯವಾಗಿತ್ತು. ಅಂಗಡಿಗಳ ಒಳಹೊಕ್ಕ ಧೂಳು ಮಿಶ್ರಿತ ಗಾಳಿಯೊಂದಿಗೆ ನ ತ್ಯಾಜ್ಯ, ಪ್ಲಾಸ್ಟಿಕ್ ಹಾಳೆಗಳು ಗಾಳಿಪಟದಂತೆ ಹಾರಾಡುವ ದೃಶ್ಯ ಎಲ್ಲೆಡೆ ಕಂಡುಬಂದಿತು.
ಹೊಲಗಳಲ್ಲಿ ಸಂಗ್ರಹಿಸಿದ್ದ ಒಣ ಮೆಣಸಿನ ಕಾಯಿ ಚೆಲ್ಲಾಪಿಲ್ಲಿಯಾಗಿದೆ. ಮಳೆ ಸುರಿದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.