ಪಕ್ಷದ ಹಿತದೃಷ್ಟಿಯಿಂದ ಭರತಗೆ ಟಿಕೆಟ್

New Project
Published on

ಶಿಗ್ಗಾಂವಿ: ಪಕ್ಷದ ಹಿತದೃಷ್ಟಿ, ಕಾರ್ಯಕರ್ತರ ಒತ್ತಾಯ ಹಾಗೂ ೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ವರಿಷ್ಠರು ಭರತ್​ಗೆ ಟಿಕೆಟ್​ ನೀಡಿದ್ದಾರೆ. ಹೀಗಾಗಿ ವರಿಷ್ಠರ, ನನ್ನ ಜನರ ನಿರ್ಧಾರಕ್ಕೆ ತಲೆ ಬಾಗಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ೇತ್ರದ ಕಾರ್ಯಕರ್ತರು, ಮತದಾರರಿಗೆ ತಲೆ ಬಾಗುತ್ತೆನೆ. ನನ್ನ ಮಗನಿಗೆ ಟಿಕೆಟ್​ ಕೊಡಿ ಎಂದು ಕೇಳಲಿಲ್ಲ, ಯಾರಿಗೂ ಟಿಕೆಟ್​ ಕೊಡಿಸುವ ಭರವಸೆ ನೀಡಿರಲಿಲ್ಲ. ನಾನು ಕಾರ್ಯಕರ್ತರಿಗೆ ಯಾವತ್ತೂ ಅನ್ಯಾಯ ಮಾಡಿಲ್ಲ, ಮುಂದೆಯೂ ಮಾಡಲ್ಲ. ಸುಮಾರು 50 ಆಕಾಂಗಳು ಇದ್ದರು, ಎಲ್ಲರಿಗೂ ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರಬೇಕು ಎಂದು ಹೇಳಿದ್ದೆ ಎಂದರು.

ಪುತ್ರ ಭರತನನ್ನು ಹೆತ್ತ ತಂದೆ&ತಾಯಿ ನಾವಾಗಿರಬಹುದು. ೇತ್ರದ ಸಾರ್ವತ್ರಿಕ ಸೇವೆಯಲ್ಲಿ ನೀವೇ ಅವನಿಗೆ ತಂದೆ&ತಾಯಿಗಳು. ನೀವು ಕೈಯಿಂದ ತೊರಿಸಿದ ಕೆಲಸ ಆತ ತಲೆ ಮೇಲೆ ಹೊತ್ತು ನಿಮ್ಮ ಸೇವೆ ಮಾಡಲಿ. ನಿಮ್ಮ ಮಡಿಲಿಗೆ ಹಾಕಿದ್ದೇನೆ. ಹಾಲಲ್ಲಾದರೂ ಹಾಕಿ, ನೀರಲ್ಲಾದರೂ ಹಾಕಿ. ನೀವು ಬೆಳೆಸಿ ಜೋಪಾನ ಮಾಡುವುದು ನಿಮಗೆ ಬಿಟ್ಟಿದ್ದು ಎಂದು ಬೊಮ್ಮಾಯಿ ಹೇಳಿದರು.

ಭರತ್​ ಬೊಮ್ಮಾಯಿ ಮಾತನಾಡಿ, ನಮ್ಮ ತಂದೆ ತಾಯಿಯ ಆಶೀರ್ವಾದದ ಫಲದಿಂದ ನನಗೆ ಈ ಅವಕಾಶ ಸಿಕ್ಕಿದೆ. ತಂದೆಯವರು ಮಾಡಿರುವ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಶಿಗ್ಗಾಂವಿ ಸವಣೂರಿನ ಜನತೆಯ ಕಷ್ಟ ಸುಖದಲ್ಲಿ ಸದಾಕಾಲ ಇರುತ್ತೇನೆ ಎಂದರು.

ಮಾಜಿ ಸಚಿವ ಸಿ.ಸಿ.ಪಟೀಲ ಮಾತನಾಡಿ, ೇತ್ರಕ್ಕೆ ಬೊಮ್ಮಾಯಿ ಅವರು ಏನು ಮಾಡಿದ್ದಾರೆ ಎಂದು ಕಾಂಗ್ರೆಸ್​ನವರು ಕೇಳುತ್ತಾರೆ. ಕಾಂಗ್ರೆಸ್​ ಆಡಳಿತದಲ್ಲಿ ಈ ೇತ್ರ ಹೇಗಿತ್ತು, ಬಸವರಾಜ ಬೊಮ್ಮಾಯಿ ಅವರ ಆಡಳಿತದಲ್ಲಿ ಹೇಗಿದೆ ಎಂಬುದನ್ನು ಕಾಂಗ್ರೆಸಿಗರು ಮೊದಲು ಅರಿಯಲಿ. ಆಗ ಬೊಮ್ಮಾಯಿ ಅವರ ಅಭಿವೃದ್ಧಿ ಕಾರ್ಯ ಗುರುತಾಗುತ್ತದೆ ಎಂದರು.

ಮಹೇಶ ಟೆಂಗಿನಕಾಯಿ, ಎಂ.ಆರ್​. ಪಾಟೀಲ, ಕಳಕಪ್ಪ ಬಂಡಿ, ಡಿಎಸ್​ ಮಾಳಗಿ ಮಾತನಾಡಿದರು. ಶಿವರಾಜ ಸಜ್ಜನರ, ವಿರೂಪಾಕ್ಷಪ್ಪ ಬಳ್ಳಾರಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಎಸ್​.ವಿ. ಸಂಕಣ್ಣನವರ, ಅರುಣಕುಮಾರ ಪೂಜಾರ, ಡಿ.ಎಂ. ಪಾಟೀಲ, ಚಂದ್ರು ಲಮಾಣಿ, ಈರಣ್ಣ ನವಲಗುಂದ, ವಿಶ್ವನಾಥ ಹರವಿ, ಗಂಗಣ್ಣ ಸಾತಣ್ಣನವರ, ಶಿವಾನಂದ ಮ್ಯಾಗೇರಿ, ಗಂಗಾಧರ ಬಾಣದ, ದೇವಣ್ಣ ಚಾಕಲಬ್ಬಿ, ಶಂಕರಗೌಡ ಪೊಲೀಸಗೌಡ್ರ, ಶೋಭಾ ನಿಸ್ಸಿಮಗೌಡ್ರ, ಮಲ್ಲೇಶಪ್ಪ ಹರಿಜನ, ಎಂ.ಎಸ್​. ಹಳವಳ್ಳಿ, ಬಿ.ಟಿ. ಇನಾಮತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net