ಯಳಂದೂರು: ಜೆಎಸ್‌ಬಿ ಪ್ರತಿಷ್ಠಾನ ಕೊಳ್ಳೇಗಾಲ ವತಿಯಿಂದ ರೈತರಿಗೆ ಮೂರು ದಿನಗಳ ಸುಸ್ಥಿರ ಕೃಷಿ ತರಬೇತಿ ಕಾರ್ಯಾಗಾರವನ್ನು ಮೇ 28, 29 ಹಾಗೂ 30 ರ ಮೂರು ದಿನಗಳವರೆಗೆ ಮೆಲ್ಲಹಳ್ಳಿ ಗೇಟ್ ಬಳಿಯಲ್ಲಿರುವ ದುಗ್ಗಹಟ್ಟಿ ರಾಜೇಶ್ ತೋಟದಲ್ಲಿ ಜರುಗಲಿದೆ.
ಈ ಕಾರ್ಯಾಗಾರದಲ್ಲಿ ಮಣ್ಣಿನ ಸಮಗ್ರ ಅಧ್ಯಯನ, ಬೆಳೆ ಸಂಯೋಜನೆ, ಗಿಡಗಳಲ್ಲಿ ಪೋಷಕಾಂಶಗಳ ಕೊರತೆಯ ಲಕಷಣಗಳು, ಸೂಕ್ಷ್ಮ ಜೀವಾಣುಗಳ ತಯಾರಿಕೆ, ಉತ್ತಮ ಕಾಂಪೋಸ್ಟ್ ಗೊಬ್ಬರ ತಯಾರಿಕೆ , ತೋಟಗಳ ಸಮಗ್ರ ಅಧ್ಯಯನ ಮತ್ತು ಪ್ರಾತ್ಯಕ್ಷಿಕೆ ಜತೆಗೆ ಸಾಕಷ್ಟು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತದೆ. ತರಬೇತಿಯನ್ನು ತುಮಕೂರು ಗಾಂಧೀಜಿ ಸಹಜ ಕೃಷಿ ಬೇಸಾಯಾಶ್ರಯದ ಕೃಷಿ ವಿಜ್ಞಾನಿ ಡಾ.ಮಂಜುನಾಥ್ ವಹಿಸಲಿದ್ದು, ಇವರ ಜತೆಗ ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು, ವಿಷಯ ತಜ್ಞರು, ಪರಿಣಿತರು, ಕೃಷಿ ವಿಜ್ಞಾನಿಗಳು ಹಾಗೂ ಅನುಭವಿ ಕೃಷಿಕರು ಆಗಮಿಸಲಿದ್ದು, ಆಸಕ್ತ ರೈತರು ಕಡ್ಡಾಯವಾಗಿ ಹೆಸರು ನೋಂದಣಿ ಮಾಡಿಸಿಕೊಳ್ಳಿಬೇಕೆಂದು ಅಧ್ಯಕ್ಷ ಎಸ್. ಶಶಿಕುಮಾರ್ ಮೊ: 9880949689/9342434530 ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.