

ಜಿ.ನಾಗರಾಜ್ ಬೂದಿಕೋಟೆ
ಬೆಳೆಯನ್ನು ರೋಗಗಳಿಂದ ರಸಿಕೊಳ್ಳಲು ಸಿಂಪಡಿಸುವ ಕೀಟ ನಾಶಕವೇ ಈಗ ರೈತರ ಪಾಲಿಕೆ ಕಂಟಕವಾಗಿ ಪರಿಣಮಿಸಿದೆ.
ತೋಟಗಾರಿಕಾ ಬೆಳೆಗಳಿಗೆ ಮತ್ತು ಹಿಪು$್ಪನೇರಳೆ ತೋಟಗಳಿಗೆ ಕೀಟನಾಶಕ ಬಳಕೆ ಮಾಡುತ್ತಿರುವುದರಿಂದ ರೇಷ್ಮೆ ಹುಳುಗಳು ಸಮರ್ಪಕವಾಗಿ ಗೂಡು ಕಟ್ಟದಿರುವುದು ಸಂಶೋಧನೆಯಿಂದ ತಿಳಿದು ಬಂದಿದ್ದು, ರೈತರಲ್ಲಿ ಆತಂಕ ಸೃಷ್ಟಿಸಿದೆ.
ಕೃಷಿಗಿಂತ ರೇಷ್ಮೆಯಲ್ಲಿ ನಿಯಮಿತ ಆದಾಯ ಬರುವುದರಿಂದ ಬಹಳಷ್ಟು ರೈತರು ರೇಷ್ಮೆ ಹುಳು ಸಾಕಣೆಯತ್ತ ಮುಖ ಮಾಡಿದ್ದಾರೆ. ಇದರ ಫಲವಾಗಿ ಜಿಲ್ಲೆಯಲ್ಲಿ ಸುಮಾರು 20 ಸಾವಿರ ಹೆಕ್ಟೇರ್ನಲ್ಲಿ ರೇಷ್ಮೆಸಾಕಣೆ ಮಾಡಲಾಗುತ್ತಿದೆ.
ಇತ್ತೀಚೆಗೆ ಹುಳುಗಳು ಸಮರ್ಪಕವಾಗಿ ಗೂಡು ಕಟ್ಟದೇ ಇರುವುದರಿಂದ ಬಿತ್ತನೆ ಮೊಟ್ಟೆ ಸರಿ ಇಲ್ಲ ಎಂದು ರೈತರು ಅನುಮಾನಿಸಿದ್ದರು. ಆದರೆ ಗೂಡು ಕಟ್ಟದೆ ಇರಲು ತೋಟಗಾರಿಕಾ ಬೆಳೆಗಳಿಗೆ ಯಥೇಚ್ಛವಾಗಿ ಕೀಟನಾಶಕ ಬಳಸುತ್ತಿರುವುದೇ ಪ್ರಮುಖ ಕಾರಣ ಎಂದು ವಿಜ್ಞಾನಿಗಳ ಸಂಶೋಧನೆಯಿಂದ ಬಹಿರಂಗವಾಗಿದೆ. ತರಕಾರಿ ಬೆಳೆಗೆ ಕೀಟನಾಶಕ ಸಿಂಪಡಣೆ ಮಾಡಿ ಸಲು ಪಡೆದ ಬಳಿಕ ಅದೇ ಜಮೀನಿನಲ್ಲಿ ಹಿಪ್ಪು ನೇರಳೆ ಬೆಳೆದು ಆ ಸೊಪ್ಪನ್ನು ಹುಳುಗಳಿಗೆ ನೀಡಿದರೆ ಹುಳುಗಳು ಸರಿಯಾಗಿ ಗೂಡು ಕಟ್ಟುವುದಿಲ್ಲ. ಅಕ್ಕಪಕ್ಕದ ಜಮೀನಿನಲ್ಲೂ ಕೀಟನಾಶಕ ಬಳಸಿದರೆ ಕಣಗಳ ರೂಪದಲ್ಲಿ ಗಾಳಿಯ ಮೂಲಕ ಸೊಪ್ಪಿಗೆ ತಗಲುತ್ತದೆ. ಇಂತಹ ಸೊಪ್ಪನ್ನು ಹುಳುಗಳಿಗೆ ನೀಡಿದರೂ ಗೂಡು ಕಟ್ಟುವ ಪ್ರಮಾಣ ಕುಸಿತಗೊಳ್ಳಲಿದೆ ಎನ್ನಲಾಗಿದೆ.
ಪರಿಹಾರ ಕ್ರಮಮಗಳೇನು?: ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಂಶೋಧನಾ ಸಂಸ್ಥೆಗಳು ಶಿಾರಸು ಮಾಡಿದ ಕೀಟನಾಶಕ ಮಾತ್ರ ಬಳಕೆ ಮಾಡಬೇಕು. ಕೀಟನಾಶಕ ಮತ್ತು ಕಳೆನಾಶಕಗಳ ಪ್ರಮಾಣ ಕಡಿಮೆ ಮಾಡುವ ಸಲುವಾಗಿ ಮುಸುಕಿನ ಜೋಳ, ರಾಗಿಯಂತಹ ಬೆಳೆಗಳನ್ನು ಬೆಳೆದು ಮಣ್ಣಿನಲ್ಲಿರುವ ರಾಸಾಯನಿಕ ಶೇಷಾಂಶ ವಿಷಾಂಶ ಹೀರಲು ಅವಕಾಶ ಮಾಡಿಕೊಡಬೇಕು. ಗಾಳಿ ಮೂಲಕ ಕೀಟನಾಶಕ ಹರಡುವುದನ್ನು ತಡೆಗಟ್ಟಲು ಹಿಪು$್ಪನೇರಳೆ ತೋಟದ ಸುತ್ತಲೂ 8 ರಿಂದ 10 ಅಡಿ ಎತ್ತರದ ಗಿಡಗಳಿಂದ ತಡೆಗೋಡೆ ನಿರ್ಮಿಸಿ ಕೆಳಭಾಗದಲ್ಲಿ ಸ್ೇನೆಟ್ ಕಟ್ಟಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವಧಿಗೂ ಮುನ್ನ ಸೊಪು$್ಪ ಕಟಾವು : ಹಿಪ್ಪುನೇರಳೆ ತೋಟಕ್ಕೆ ಬಳಕೆ ಮಾಡುವ ಕೀಟನಾಶಕಗಳ ಪ್ರಮಾಣ ಹೆಚ್ಚಾದರೆ ಹಾಗೂ ಕೀಟನಾಶಕ ಸಿಂಪಡಣೆ ಮಾಡಿದ ನಂತರ ಸುರಕ್ಷತಾ ಅವಧಿ ಮುಗಿಯುವುದಕ್ಕೂ ಮುಂಚೆ ಸೊಪ್ಪನ್ನು ಕಟಾವು ಮಾಡಿ ಹುಳುಗಳಿಗೆ ಹಾಕಿದರೂ ಗೂಡು ಕಟ್ಟುವ ಪ್ರಮಾಣ ಕುಂಠಿತಗೊಳ್ಳುತ್ತದೆ. ಜತೆಗೆ ಜಮೀನಿನಲ್ಲಿ ಕೀಟನಾಶಕಗಳ ಸಿಂಪಡಣೆಗೆ ಬಳಸಿದ ಸ್ಪೆಯರ್ಗಳನ್ನು ಹುಳು ಸಾಕುವ ಮನೆಯಲ್ಲಿ ಸೋಂಕು ನಿವಾರಣೆಗೆ ಬಳಸಿದರೂ ಸಮಸ್ಯೆ ಕಂಡುಬರುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.
ರೇಷ್ಮೆ ಬೆಳೆಗಾರರು ಅಕ್ಕಪಕ್ಕದ ತರಕಾರಿ, ಹೂವು ಬೆಳೆಯುವ ರೈತರೊಂದಿಗೆ ಉತ್ತಮ ಬಾಂಧವ್ಯ ಹೊಂದಿ, ತರಕಾರಿ ಬೆಳೆಗಳಿಗೆ ವಿಷಯುಕ್ತ ಕೀಟನಾಶಕ ಸಿಂಪಡಣೆ ಮಾಡದಂತೆ ಮನವೊಲಿಸಿ ಹಿಪು$್ಪನೇರಳೆ ಬೆಳೆ ಮತ್ತು ಹುಳುಗಳನ್ನು ರಕ್ಷಿಸಿಕೊಳ್ಳಬೇಕು. ಹಿಪು$್ಪನೇರಳೆ ತೋಟದಲ್ಲಿ ಕಳೆ ನಿರ್ವಹಣೆಗಾಗಿ ಕಳೆನಾಶಕದ ಬದಲು ಉಳುಮೆ ಮಾಡುವುದು ಉತ್ತಮ. ಅಕ್ಕಪಕ್ಕದ ತೋಟಗಳಲ್ಲಿ ಕೀಟನಾಶಕ ಸಿಂಪಡಣೆ ಮಾಡುವ ಸಂದರ್ಭದಲ್ಲಿ ಹಿಪು$್ಪನೇರಳೆ ತೋಟದಲ್ಲಿ ಸ್ಪಿಂಕ್ಲರ್ ಅಳವಡಿಸಿ ನೀರನ್ನು ಹಾಯಿಸುವ ಮೂಲಕ ಕೀಟನಾಶಕ ತಡೆಗಟ್ಟಬಹುದು.
ಶ್ರೀನಿವಾಸ್ ಉಪನಿರ್ದೇಶಕ, ರೇಷ್ಮೆ ಇಲಾಖೆ ಬಂಗಾರಪೇಟೆ