

ಮೈಸೂರು: ಮನೆಗಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಕುವೆಂಪುನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾ.20 ರಂದು ಮನೆಯೊಂದರಲ್ಲಿ ಕಳ್ಳತನ ನಡೆದಿತ್ತು. ಈ ಕುರಿತು ದೂರು ದಾಖಲಿಸಿಕೊಂಡ ಕುವೆಂಪುನಗರ ಪೊಲೀಸರು ಶುಕ್ರವಾರ ಶಂಕಾಸ್ಪದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ಸಂದರ್ಭ ಮನೆಕಳವು ಪ್ರಕರಣ ಬಯಲಿಗೆ ಬಂದಿದೆ. ಆರೋಪಿಯಿಂದ 1.75 ಲಕ್ಷ ರೂ.ಮೌಲ್ಯದ 35 ಗ್ರಾಂ ತೂಕದ ಚಿನ್ನ ಹಾಗೂ ಬೆಳ್ಳಿಯ ಪದಾರ್ಥಗಳು ಹಾಗೂ ಕಳವು ಮಾಡಿದ ಹಣದಿಂದ ಖರೀದಿಸಿದ ಟಾಟಾ ಗೂಡ್ಸ್‌ಅನ್ನು ವಶಕ್ಕೆ ಪಡೆದಿದ್ದಾರೆ.
ಡಿಸಿಪಿ ಜಾಹ್ನವಿ ಮಾರ್ಗದರ್ಶನ, ಕೃಷ್ಣರಾಜ ವಿಭಾಗದ ಎಸಿಪಿ ಗಂಗಾಧರಸ್ವಾಮಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕುವೆಂಪುನಗರ ಇನ್ಸ್‌ಪೆಕ್ಟರ್ ಎಲ್. ಅರುಣ್, ಪಿಎಸ್‌ಐಗಳಾದ ಎಸ್.ಪಿ. ಗೋಪಾಲ್, ಎಂ.ರಾಧಾ, ಸಿಬ್ಬಂದಿ ಆನಂದ್ ವಿ. ಮಂಜುನಾಥ್, ಹಜರತ್ ಅಲಿ, ಎನ್.ಕೆ. ಪುಟ್ಟಪ್ಪ, ಸುರೇಶ್, ನಾಗೇಶ್ ಪಾಲ್ಗೊಂಡಿದ್ದರು.