ಬೆಂಗಳೂರಿನಲ್ಲಿ ಭೀಕರ ಅಪಘಾತ; 2 ಬೈಕ್​​ಗಳು ಡಿಕ್ಕಿಯಾಗಿ ಇಬ್ಬರು ಮೃತ್ಯು

bengluru accident raksha
Published on

ಬೆಂಗಳೂರು: ಎರಡು ಬೈಕ್​​ಗಳು ಡಿಕ್ಕಿಯಾಗಿ ಬೆಂಗಳೂರಿನಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಕೆಂಗೇರಿ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ನರಸಪ್ಪ‌ (51) ರಕ್ಷಾ (21) ಮೃತರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೆಂಗೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿನ್ನೆ ರಾತ್ರಿ 11.40ರ ಸುಮಾರಿಗೆ ರಕ್ಷಾ, ಚಂದನ್ ಜತೆಯಾಗಿ ಪಲ್ಸರ್ ಬೈಕ್​​​ನಲ್ಲಿ ಸ್ಪೀಡಾಗಿ ಹೋಗುತ್ತಿದ್ದರು. ಮಾರುತಿ ನಗರ ಮುಖ್ಯ ರಸ್ತೆಯಲ್ಲಿ ಕೇಲ್‌ಇ ಕಾಲೇಜು ಕಡೆ ಸ್ಪೀಡಾಗಿ ಹೋಗ್ತಿದ್ದರು, ಈ ವೇಳೆ‌ ಅದೇ ರಸ್ತೆಯಲ್ಲಿ ಬರ್ತಿದ್ದ ನರಸಪ್ಪ ಬೈಕ್​​ಗೆ ಚಂದನ್ ಬೈಕ್​ ಡಿಕ್ಕಿ ಹೊಡೆದಿದ್ದಾನೆ.

ಈ ಭೀಕರ ಅಪಘಾತದ ಪರಿಣಾಮ ನರಸಪ್ಪಗೆ ಗಂಭೀರ ಗಾಯವಾಗಿ ಘಟನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಚಂದನ್ ಮತ್ತು ರಕ್ಷಾಗೂ ಗಂಭೀರ ಗಾಯಗಳಾಗಿತ್ತು. ಆಸ್ಪತ್ರೆಗೆ ಸೇರಿಸೋವಷ್ಟರಲ್ಲಿ ರಕ್ಷಾ ಅಸುನೀಗಿದಳು. ಸದ್ಯ ಗಾಯಾಳು ಚಂದನ್​​ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net