ಕಂದಮ್ಮಗಳ ನೋಡಿ ಕಣ್ಣೀರಾದ ಜನ: ಮಕ್ಕಳಿಬ್ಬರ ಮೃತದೇಹಗಳನ್ನು ದುರ್ಘಟನೆ ನಡೆದಲ್ಲಿಗೆ, ಅವರ ಬಾಡಿಗೆ ಮನೆಗೆ ತಂದು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ಸಂದರ್ಭ ಕಪಿತಾನಿಯೋ ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ನಾಗುರಿ ಪರಿಸರದ ನೂರಾರು ಮಂದಿ ಆಗಮಿಸಿ, ಕಣ್ಣೀರು ಹರಿಸಿದರು. ಬಹಳಷ್ಟು ಮಂದಿ ಭಾವುಕರಾಗಿ ಇಂತಹ ಘಟನೆ ಎಲ್ಲೂ ನಡೆಯದಿರಲಿ ಎಂದು ಮೃತ ಮಕ್ಕಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.