ಸವದಿ ಸರ್​ಗೆ ಕಣ್ಣೀರ ಬೀಳ್ಕೊಡುಗೆ

18 lxr 1 KANNIRU
Published on

ಲಕ್ಷೆ್ಮೕಶ್ವರ: ತಾಲೂಕಿನ ಬಾಲೆಹೊಸೂರ ಗ್ರಾಮದ ಶ್ರೀ ದಿಂಗಾಲೇಶ್ವರ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಹಾವೀರ ಸವದಿ ವರ್ಗಾವಣೆಗೊಂಡಿದ್ದು, ನೂರಾರು ವಿದ್ಯಾರ್ಥಿಗಳು ಗುರುವಾರ ಕಣ್ಣೀರಿಟ್ಟು ಬೀಳ್ಕೊಡುಗೆ ನೀಡಿದರು.

ಬಾಗಲಕೋಟೆಯವರಾದ ಮಹಾವೀರ 13 ವರ್ಷಗಳಿಂದ ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಶಾಲೆಯ ಮಕ್ಕಳ ಪ್ರೀತಿಗಳಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದರೂ ಪಠ್ಯ ವಿಷಯ ಬೋಧನೆ ಮೂಲಕ ವಿಷಯ ಶಿಕ್ಷಕರ ಕೊರತೆ ನೀಗಿಸಿದ್ದರು. ಮಕ್ಕಳಿಗೆ ಪಠ್ಯೇತರ ಶಿಕ್ಷಣ, ನೈತಿಕ ಶಿಕ್ಷಣ ಹೇಳುವ ಮೂಲಕ ಅಚ್ಚುಮೆಚ್ಚಿನನವರಾಗಿದ್ದರು. ಮಕ್ಕಳು ಶಾಲೆ ತಪ್ಪಿಸದಂತೆ, ವಾರ್ಷಿಕ ಪರೀಕ್ಷೆ ವೇಳೆ ವಿಶೇಷ ತರಗತಿ, ಮಕ್ಕಳ ಮೇಲೆ ನಿಗಾ ವಹಿಸುವ ಕಾರ್ಯಮಾಡುತ್ತಿದ್ದರು. ಅಷ್ಟೇ ಅಲ್ಲದೇ ಗ್ರಾಮಸ್ಥರ, ಪಾಲಕರ, ಸಹೋದ್ಯೋಗಿ ಶಿಕ್ಷಕರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದರು. ಇದೀಗ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಥಣಿ ತಾಲೂಕಿನ ಛರಟ್ಟಿ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಯಾಗಿದ್ದಾರೆ. ಗುರುವಾರ ಶಾಲೆಯಲ್ಲಿ ಗ್ರಾಮಸ್ಥರ ಪರವಾಗಿ ಗೌರವಾರ್ಪಣೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸೇರಿದ್ದ ಮಕ್ಕಳು, ಪಾಲಕರು, ಶಿಕ್ಷಕರು ಅವರನ್ನು ಬಿಟ್ಟುಕೊಡಲಾಗದೆ ಬಿಕ್ಕಿಬಿಕ್ಕಿ ಅತ್ತರು. ಮುಖ್ಯೋಪಾಧ್ಯಾಯ ಎ.ವಿ. ಅಡಿವೇರ, ನಾಗಯ್ಯ ಮಠಪತಿ, ವಿರುಪಾಕ್ಷಪ್ಪ ಮರಳಿಹಳ್ಳಿ, ಪರಶುರಾಮ ಮೈಲಾರಿ, ಸಿದ್ದಪ್ಪ ನೆನಗನಹಳ್ಳಿ, ಹನುಮಂತಪ್ಪ ಬಂಡಿ, ನಿಂಗಪ್ಪ ಗುಡ್ಡಣ್ಣವರ, ಲೋಕೇಶ ಜಾಲವಾಡಗಿ, ಕೇಶವ ಕಟ್ಟಿಮನಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net