

ರಬಕವಿ-ಬನಹಟ್ಟಿ : ರಾಜ್ಯ ನೀರಾವರಿ ನಿಗಮದಿಂದ ಸರ್ವೋಚ್ಛ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವ ಹಿರಿಯ ನ್ಯಾಯವಾದಿ ಮೋಹನ ಕಾತರಕಿ ನೇತೃತ್ವದ ನ್ಯಾಯವಾದಿಗಳ ತಂಡ ಇತ್ತೀಚೆಗೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ಗೆ ಭೇಟಿ ನೀಡಿ ಬ್ಯಾರೇಜ್ ಪರಿಶೀಲಿಸಿತು.
ರಾಜ್ಯ ನೀರಾವರಿ ಅಧಿಕಾರಿಗಳು ಭಾಗವಹಿಸಿ ನೀರಿನ ಪ್ರಮಾಣ, ಸಾಧಕ-ಬಾಧಕಗಳ ಕುರಿತು ವಿಷಯ ಮಂಡಿಸಿದರು.
ಹಿರಿಯ ನ್ಯಾಯವಾದಿ ಮೋಹನ ಕಾತರಕಿ ಸುದ್ದಿಗಾರರೊಂದಿಗೆ ಮಾತನಾಡಿ, ಕೃಷ್ಣಾ ನದಿ ಪ್ರವಾಹದ ಸಂದರ್ಭ ಹಾಗೂ ನೀರು ಶೇಖರಣೆ ಕುರಿತಾದ ಮಾಹಿತಿಗಾಗಿ ಭೇಟಿ ನೀಡಿ ಬ್ಯಾರೇಜ್ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ನಿಗಮದ ಮುಖ್ಯ ಕಾರ್ಯನಿರ್ವಾಹಕ ಬಿ.ಆರ್. ನಂದೀಶ, ವ್ಯವಸ್ಥಾಪಕ ಕಾರ್ಯನಿರ್ವಾಹಕ ಎಸ್.ಸಿ. ರಮೇಂದ್ರ, ವಿ.ಎನ್. ರಘುಪತಿ, ಅನೀಲಕುಮಾರ, ಎಂ.ಎಸ್. ಮೋಹನ, ಹಿಪ್ಪರಗಿ ಸಹಾಯಕ ಇಂಜಿನಿಯರ್ ಎಂ.ಪಿ. ಶಿವಮೂರ್ತಿ, ಬಸವರಾಜ ಮಾಳಿ ಇದ್ದರು.