ಕಾಶ್ಮೀರಕ್ಕೆ ತೆರಳಿದ್ದ 30 ಜನರ ತಂಡ ಸುರಕ್ಷಿತ

A team of 30 people who went to Kashmir is safe
Published on

ಹಾನಗಲ್ಲ: ತಾಲೂಕಿನಿಂದ ಜಮ್ಮು-ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ 30 ಪ್ರಯಾಣಿಕರು ಸದ್ಯ ಕತ್ವಾ ಪ್ರದೇಶದಲ್ಲಿ ಸುರಕ್ಷಿತವಾಗಿದ್ದು, ಏ. 24ರಂದು ದೆಹಲಿ ಮೂಲಕ ಕರ್ನಾಟಕದತ್ತ ಪ್ರಯಾಣ ಬೆಳೆಸಲಿದ್ದಾರೆ.

ಕಾಶ್ಮೀರದಲ್ಲಿ ಲಷ್ಕರ್ ಉಗ್ರರಿಂದ ಮಂಗಳವಾರ ನಡೆದ ಗುಂಡಿನ ದಾಳಿಯಿಂದಾಗಿ ಹಾನಗಲ್ಲಿನಿಂದ ಜಮ್ಮು-ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದವರ ಸಂಬಂಧಿಗಳು ತೀವ್ರ ಆತಂಕಕ್ಕೊಳಗಾಗಿದ್ದರು. ಹಾನಗಲ್ಲಿನಿಂದ ಏ. 17ರಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ಮೂಲಕ 30 ಜನರ ತಂಡವೊಂದು ಪ್ರವಾಸಕ್ಕೆಂದು ತೆರಳಿತ್ತು. ಗುಂಡಿನ ದಾಳಿ ಘಟನೆ ನಡೆದ ಸಂದರ್ಭದಲ್ಲಿ ಇವರೆಲ್ಲ ಅದರ ಸಮೀಪದ ಕತ್ವಾ ಪ್ರದೇಶದಲ್ಲಿದ್ದರು. ಉಗ್ರರ ದಾಳಿ ಘಟನೆಯಿಂದ ಭಯಗೊಂಡು ರಾತ್ರಿಯೇ ಅಲ್ಲಿಂದ ಬೇರೆ ಪ್ರದೇಶಕ್ಕೆ ತೆರಳಿದ್ದಾರೆ. ಬುಧವಾರ ಕತ್ವಾ ಪ್ರದೇಶದಲ್ಲಿ ತಂಗಿದ್ದು, ಗುರುವಾರ ದೆಹಲಿ ಮೂಲಕ ಕರ್ನಾಟಕದತ್ತ ಪ್ರಯಾಣ ಬೆಳೆಸಲಿದ್ದಾರೆ.

ತಂಡದಲ್ಲಿ ಹಾನಗಲ್ಲಿನ ಸುರೇಶ ಸಿಂಧೂರ, ನಾಗರಾಜ ಮಿರ್ಜಿ, ನಂದರಾಮ ಗುರ್ಲಹೊಸೂರ, ಶಂಕರ ಹಾದಿಮನಿ, ಕೆ.ಪಿ. ಕೆರೆಸ್ವಾಮಿಗೌಡ, ಕುಮಾರ ಹತ್ತಿಕಾಳ, ಮನೋಹರ ಬೊಮ್ಮನಹಳ್ಳಿ ಕುಟುಂಬದ ಒಟ್ಟು 30 ಜನರು ಪ್ರವಾಸದಲ್ಲಿದ್ದಾರೆ. ಎಲ್ಲರೂ ಸುರಕ್ಷಿತವಾಗಿರುವುದಾಗಿ ಸಂದೇಶ ರವಾನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net