

ರಾಮನಗರ: ಬಿಡದಿ ಬಳಿ ಇರುವ ಭಾರತದ ಅತಿದೊಡ್ಡ ಅಮ್ಯೂಸ್ಮೆಂಟ್ ಪಾರ್ಕ್ ವಂಡರ್ಲಾ ಹಾಲಿಡೇಸ್ ಸಂಸ್ಥೆ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗೆ ಗೌರವ ಸಮರ್ಪಿಸುವ ಸಲುವಾಗಿ 150 ಶಾಲೆಗಳ 300 ಶಿಕ್ಷಕರಿಗೆ ಉಚಿತ ಪ್ರವೇಶ ನೀಡುತ್ತಿದೆ.
ಇದಷ್ಟೇ ಅಲ್ಲದೆ, ಆ.29ರಿಂದ ಸೆ.5ರ ಅವಧಿಯಲ್ಲಿ ವಂಡರ್ಲಾ ಪಾರ್ಕ್ಗೆ ಭೇಟಿ ನೀಡುವ ಎಲ್ಲ ಶಿಕ್ಷಕರಿಗೂ ಬುಕಿಂಗ್ ಮೇಲೆ ಶೇ.20 ರಿಯಾಯಿತಿ ಘೋಷಿಸಿದೆ. ಈ ಕೊಡುಗೆ ಪಡೆಯಲು ಕಡ್ಡಾಯವಾಗಿ ಗುರುತಿನ ಚೀಟಿ ತೋರಿಸಬೇಕು. ವಿವರಗಳಿಗೆ www.wonderla.com ಭೇಟಿ ನೀಡಿ ಅಥವಾ 080- 37230333, 080 - 35073966 ಕರೆ ಮಾಡಬಹುದು.