ಶಿಕ್ಷಕರ ಮೇಲಿದೆ ಗುರುತರ ಜವಾಬ್ದಾರಿ

13
ಯಕ್ಸಂಬಾ ಶಿವಶಂಕರ ಜೊಲ್ಲೆ ಇಂಗ್ಲಿಷ್ ಮೀಡಿಯಂ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅಣ್ಣಾಸಾಹೇಬ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ, ಗೀತಾ ನಾಯ್ಡು, ಉರ್ಮಿಳಾ ಚೌಗಲೆ, ರಮಜಾನ್ ದೇದಾರ ಇತರರು ಪಾಲ್ಗೊಂಡಿದ್ದರು.
Published on

ಚಿಕ್ಕೋಡಿ: ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಸಮಾಜ ಹಾಗೂ ದೇಶಕ್ಕೆ ಸುಸಂಸ್ಕೃತ ನಾಗರಿಕರ ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಅವರ ಮೇಲಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ತಾಲೂಕಿನ ಯಕ್ಸಂಬಾ ಶಿವಶಂಕರ ಜೊಲ್ಲೆ ಇಂಗ್ಲಿಷ್ ಮೀಡಿಯಂ ಪಬ್ಲಿಕ್ ಶಾಲೆಯ ಕ್ಯಾಂಪಸ್ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಿಕ್ಷಕರಿಗಾಗಿ ಪರಿಣಾಮಕಾರಿ ಬೋಧನಾ ಪದ್ಧತಿ ಹಾಗೂ ತರಗತಿ ನಿರ್ವಹಣೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಜೀವನ ಕೌಶ ಲಗಳನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು ಎಂದರು.

ಎಂಬಿಡಿ ಗ್ರೂಪ್ ದೆಹಲಿಯ ತರಬೇತುದಾರ ಗೌರವ ಧೀಮನ್, ಶಿಕ್ಷಕರು ಪರಿಣಾಮಕಾರಿ ಬೋಧನಾ ಪದ್ಧತಿ, ತರಗತಿ ನಿರ್ವಹಣೆ ಕುರಿತು ತಿಳಿಸಿದರು.
ಆಶಾಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಅಧ್ಯಕ್ಷ ಜ್ಯೋತಿ ಪ್ರಸಾದ ಜೊಲ್ಲೆ, ಪ್ರಾಚಾರ್ಯೆ ಗೀತಾ ನಾಯ್ಡು, ಉರ್ಮಿಳಾ ಚೌಗಲೆ, ರಮಜಾನ್ ದೇದಾರ, ಎಂಬಿಡಿ ಗ್ರೂಪ್ ದೆಹಲಿಯ ವೆಂಕಟೇಶ, ಮಹೇಶ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net