ವಾಯುವಿಹಾರ ಮಾಡುತ್ತಿದ್ದ ಮಹಿಳೆಗೆ ಟಾಟಾ ಏಸ್ ಡಿಕ್ಕಿ, ಸ್ಥಳದಲ್ಲೇ ಸಾವು

15ANKOLA1 _Accident
Published on

ಅಂಕೋಲಾ: ಹೆದ್ದಾರಿಯಂಚಿನಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಮಹಿಳೆಯೊಬ್ಬರಿಗೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ರಾ.ಹೆ. 66ರ ಕೋಟೆವಾಡ ಸಮೀಪ ಸೋಮವಾರ ನಡೆದಿದೆ.

ಶಿಶು ಅಭಿವೃದ್ಧಿ ಇಲಾಖೆಯ ನಿವೃತ್ತ ಅಧಿಕಾರಿ ಲಕ್ಷ್ಮೀ ರಮೇಶ ನಾಯಕ (65) ಮೃತ ದುದೈರ್ವಿ.

ಸೋಮವಾರ ಬೆಳಗ್ಗೆ ಹೆದ್ದಾರಿ ಪಕ್ಕದ ಕಚ್ಚಾ ರಸ್ತೆಯಲ್ಲಿ ವಾಕಿಂಗ್ ಮಾಡಿಕೊಂಡು ಹೊರಟಿದ್ದ ಸಂದರ್ಭದಲ್ಲಿ ಕುಮಟಾ ಕಡೆಯಿಂದ ಕಾರವಾರ ಕಡೆ ಹೋಗುತ್ತಿದ್ದ ಟಾಟಾ ಏಸ್ ವಾಹನ ಲಕ್ಷ್ಮೀಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತದ ರಭಸಕ್ಕೆ ತಲೆಯ ಮಧ್ಯಭಾಗಕ್ಕೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಘಟನೆ ಕುರಿತು ಕಾರವಾರ ತಾಲೂಕಿನ ಬಾಡ ಬಾಂಡಿಕಟ್ಟಾದ ನಿವಾಸಿ ಮಯೂರ ಮದನ ಅರ್ಗೆಕರ ವಿರುದ್ಧ ಪುಂಡಲೀಕ ಸದಾನಂದ ಕಾಮತ ಅವರು ಅಂಕೋಲಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net