

ಭಟ್ಕಳ: ಮೂಢಭಟ್ಕಳ ಬೈಪಾಸ್ ಸಮೀಪ ಶನಿವಾರ ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿದ ಕ್ಯಾಶು ಆಯಿಲ್ ತುಂಬಿದ ಟ್ಯಾಂಕರ್ ಪಲ್ಟಿಯಾಗಿ ಅಪಘಾತ ಸಂಭವಿಸಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.]
ರಾಜಸ್ಥಾನ ಮೂಲದ ಮದನ ಗಾಯಗೊಂಡ ಲಾರಿ ಚಾಲಕ. ಮಂಗಳೂರಿನಿಂದ ಕ್ಯಾಶು ಆಯಿಲ್ ತುಂಬಿದ ಟ್ಯಾಂಕರ್ ತೆಗೆದುಕೊಂಡು ಹರಿಯಾಣ ಕಡೆಗೆ ಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಪುರವರ್ಗ ಕಡೆಯಿಂದ ಮೂಢ ಭಟ್ಕಳ ಬೈಪಾಸ್ ಕಡೆಗೆ ಬರುತ್ತಿದ್ದ ವೇಳೆಗೆ ಮುಂಬದಿಯಲ್ಲಿ ಹೋಗುತ್ತಿದ್ದ ಬಸ್ ಚಾಲಕ ಹಂಪ್ ನೋಡಿ ತಕ್ಷಣ ಬ್ರೇಕ್ ಹಾಕಿದ್ದಾನೆ. ಇದನ್ನು ಗಮನಿಸಿದ ಟ್ಯಾಂಕರ್ ಚಾಲಕ ಬಸ್ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಟ್ಯಾಂಕರ್ ಅನ್ನು ಎಡ ಭಾಗಕ್ಕೆ ತೆಗೆದುಕೊಂಡಿದ್ದಾನೆ. ಆದರೆ, ಟ್ಯಾಂಕರ್ ನಿಯಂತ್ರಣ ತಪ್ಪಿ ಅಲ್ಲೇ ಇದ್ದ ಸಣ್ಣ ಪ್ರಪಾತಕ್ಕೆ ಬಿದ್ದಿದೆ. ಇದರಿಂದಾಗಿ ಕ್ಯಾಶು ಆಯಿಲ್ ತುಂಬಿದ ಟ್ಯಾಂಕರ್ ರಂಧ್ರವಾಗಿ ಸೋರಿಕೆಯಾಗಿದೆ.