ಸರದಿ ಸಾಲಿನಲ್ಲೇ ಬಂದು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ತಮಿಳು ನಟ ದಳಪತಿ ವಿಜಯ್​!

1241737
Published on

ಬೆಂಗಳೂರು: ತಮಿಳು ನಟ ಇಳೆಯ ದಳಪತಿ ವಿಜಯ್​ ಅವರು ಸರದಿ ಸಾಲಿನಲ್ಲೇ ಬಂದು ಅಪ್ಪು ಸಮಾಧಿಗೆ ಹೂಗುಚ್ಛ ಇಟ್ಟು ಪೂಜೆ ಸಲ್ಲಿಸಿದ್ದಾರೆ. ವಿಜಯ್ ಯಾರಿಗೂ ಸಣ್ಣ ಸುಳಿವು ಕೊಡದಂತೆ ಕಂಠೀರವ ಸ್ಟುಡಿಯೋಗೆ ಶನಿವಾರ ಆಗಮಿಸಿ ಅಪ್ಪುಗೆ ನಮಿಸಿದರು.

ನಟ ಪುನೀತ್​ ರಾಜ್​ಕುಮಾರ್​ ನಮ್ಮನ್ನು ಅಗಲಿ 3 ತಿಂಗಳು ಕಳೆದರೂ ಅಭಿಮಾನಿಗಳ ಮನದಲ್ಲಿನ ನೋವು ಇನ್ನೂ ಮಡುಗಟ್ಟಿದೆ. ನಿತ್ಯ ಸಾವಿರಾರು ಮಂದಿ ಕಂಠೀರವ ಸ್ಟುಡಿಯೋಗೆ ಬಂದು ಅಪ್ಪು ಸಮಾಧಿಗೆ ನಮಿಸುತ್ತಿದ್ದಾರೆ. ಅಪ್ಪು ಸಮಾಧಿಯ ದರ್ಶನ ಪಡೆಯಲೆಂದೇ ನೂರಾರು, ಸಾವಿರಾರು ಕಿಲೋ ಮೀಟರ್​ ದೂರದಿಂದಲೂ ಅಭಿಮಾನಿಗಳು, ಗಣ್ಯರು, ಚಿತ್ರನಟರು ಬರುತ್ತಿದ್ದಾರೆ. ಆದರಿಂದು ಅಭಿಮಾನಿಗಳಿಗೆ, ಅಪ್ಪು ಕುಟುಂಬ ಸದಸ್ಯರಿಗೂ ಸಣ್ಣ ಸುಳಿವೂ ನೀಡದಂತೆ ವಿಜಯ್ ಅವರು ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದರು. ಸರದಿ ಸಾಲಿನಲ್ಲಿ ಸಾಮಾನ್ಯ ಅಭಿಮಾನಿಯಂತೆ ಬಂದು ಅಚ್ಚರಿ ಮೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net