ಮಂಗಳೂರಿನ ತಲಕಳ 'ಧರ್ಮ ಚಾವಡಿ' ಖ್ಯಾತಿಯ ಸ್ವಾಮೀಜಿ ಆತ್ಮಹತ್ಯೆ

talakala srikrishna devi prasad teertha swamiji
Published on

ಗುರುಪುರ(ದಕ್ಷಿಣ ಕನ್ನಡ): ಮಂಗಳೂರು ತಾಲೂಕಿನ ಕಂದಾವರ ಪಂಚಾಯಿತಿ ವ್ಯಾಪ್ತಿಯ ಕೊಳಂಬೆ ಗ್ರಾಮದಲ್ಲಿ ತಲಕಳ ಶೆಟ್ಟಿಪಾಲ್ ಎಂಬಲ್ಲಿ ಶ್ರೀ ಕೃಷ್ಣ ದೇವಿಪ್ರಸಾದ ತೀರ್ಥ ಸ್ವಾಮೀಜಿ(50) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ವಾಮೀಜಿಗಳು ಕೊಳಂಬೆ ಗ್ರಾಮದ ತಲಕಲ ಎಂಬಲ್ಲಿ ನೂತನವಾಗಿ ನಿರ್ಮಿಸಲಾದ ‘ಧರ್ಮ ಚಾವಡಿ’ಯ ಧರ್ಮದರ್ಶಿಯಾಗಿದ್ದರು. ಶುಕ್ರವಾರ ಮುಂಜಾನೆ ದೇವರಿಗೆ ಪೂಜೆ ಮಾಡಿದ ಬಳಿಕ ಮಠದ ಕೋಣೆಯಲ್ಲಿ ಫ್ಯಾನಿಗೆ ನೇಣುಬಿಗಿದುಕೊಂಡು ಮೃತಪಟ್ಟಿದ್ದಾರೆ.

ಇವರ ಪೂರ್ವಶ್ರಮದ ಹೆಸರು ದೇವಿಪ್ರಸಾದ ಶೆಟ್ಟಿ. ಇವರಿಗೆ ಮದುವೆ ಆಗಿ ಪತ್ನಿ, ಓರ್ವ ಪುತ್ರಿ ಇದ್ದಾರೆ. 5 ವರ್ಷದ ಹಿಂದೆ ಸನ್ಯಾತ್ವ ದೀಕ್ಷೆ ಪಡೆದುಕೊಂಡರು. ಅಂದಿನಿಂದ ಇವರ ಹೆಸರು ಶ್ರೀ ಕೃಷ್ಣ ದೇವಿಪ್ರಸಾದ ತೀರ್ಥ ಸ್ವಾಮೀಜಿ ಎಂದು ಬದಲಾಯಿತು. ಕುಟುಂಬದಿಂದ ಹೊರ ಬಂದದ ಇವರು ತಲಕಳದ ಮಠದಲ್ಲೇ ವಾಸಿಸುತ್ತಿದ್ದರು.

ಕಳೆದ ವರ್ಷ ಧರ್ಮ ಚಾವಡಿಯಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಅದ್ದೂರಿಯ ಪೂಜಾ ಕಾರ್ಯಕ್ರಮ ನಡೆದಿತ್ತು. ಧರ್ಮ ಚಾವಡಿಗೆ ಬರುತ್ತಿದ್ದ ಭಕ್ತರಿಗೆ ಭವಿಷ್ಯದ ಬಗ್ಗೆ ನಿಖರ ಮಾಹಿತಿ ನೀಡುತ್ತಾ, ಅತ್ಯಲ್ಪ ಸಮಯದಲ್ಲೇ ಭಾರೀ ಜನಪ್ರಿಯರಾಗಿದ್ದರು.

ಇನ್ನು ಸ್ವಾಮೀಜಿಯವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದರೂ, ಪ್ರಕರಣ ದಾಖಲಿಸಿಕೊಂಡಿರುವ ಬಜ್ಪೆ ಪೊಲೀಸರು ಎಲ್ಲ ವಲಯಗಳಿಂದ ತನಿಖೆ ಆರಂಭಿಸಿದ್ದಾರೆ. ಶ್ರೀಗಳ ಪೂರ್ವಾಶ್ರಮದ ಪತ್ನಿ ಪ್ರಭಾ ಶೆಟ್ಟಿ ಅವರು ಸಾವಿನ ಕುರಿತು ತನಿಖೆ ಮಾಡುವಂತೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net