ರೈತರನ್ನು ಹೆದರಿಸುವ ತಂತ್ರ

A tactic to scare farmers
ಜಮಖಂಡಿ ನಗರದ ಕಾನಿಪ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ಸಿ.ಆರ್.ಸುತಾರ ಮಾತನಾಡಿದರು. ಬಾಬಾಗೌಡ ಪಾಟೀಲ, ಸುಭಾಸ ಪಾಟೀಲ, ರಮೇಶ ಪಾಟೀಲ, ಗಿರಮಲ್ಲಪ್ಪ ಅಂಬಿ, ಗುರುಪಾದ ಕುಂಚನೂರ ಇದ್ದಾರೆ.
Published on

ಜಮಖಂಡಿ: ತಾಲೂಕಿನ ಶೂರ್ಪಾಲಿ, ತುಬಚಿ ಗ್ರಾಮದಲ್ಲಿ 2024-25ನೇ ಸಾಲಿನಲ್ಲಿ ಕೃಷ್ಣಾ ನದಿಯ ಪ್ರವಾಹದಲ್ಲಿ ಬೆಳೆ ಹಾನಿಯಾದ ರೈತರಿಗೆ ಪರಿಹಾರ ನೀಡಿ, ಮತ್ತೆ ಇಲ್ಲಿನ ಅಧಿಕಾರಿಗಳು ಪರಿಹಾರ ಹಣವನ್ನು ವಾಪಸ್ಸು ಪಡೆಯಲು ಪೊಲೀಸ್‌ರ ಮೂಲಕ ರೈತರಿಗೆ ಕಿರಿಕಿರಿ ಮಾಡುತಿದ್ದಾರೆ ಎಂದು ರೈತ ಸಾಂತ್ವಾನ ಕೇಂದ್ರದ ಅಧ್ಯಕ್ಷ ನ್ಯಾಯವಾದಿ ಸಿ.ಆರ್. ಸುತಾರ ಆರೋಪಿಸಿದರು.

ನಗರದ ಕಾನಿಪ ಸಂಘದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ರೈತರ ಎರಡು ಸರ್ವೆ ನಂಬರಿನ ಜಮಿನುಗಳಿವೆ ನದಿ ತೀರದ ಸರ್ವೆನಂಬರಿನ ಜಮಿನುಗಳಲ್ಲಿನ ಬೆಳೆಹಾನಿಗೆ ಪರಿಹಾರ ನೀಡದೆ ನದಿದಡದಿಂದ ದೂರ ಇರುವ ಮುಳುಗಡೆ ಆಗದೆ ಉಳಿದ ಸರ್ವೇ ನಂಬರನ್ನು ತಪ್ಪಾಗಿ ಬಳಸಿಕೊಂಡು ನಮಗೆ ಬೆಳೆ ಪರಿಹಾರ ನೀಡಿದ್ದಾರೆ. ಅವರೆ ತಪ್ಪು ಮಾಡಿ ಈಗ ರೈತರ ಮೇಲೆ ದಬ್ಬಾಳಿಕೆಯಿಂದ ಪರಿಹಾರ ಹಣ ವಸೂಲಿ ಮಾಡುತಿದ್ದಾರೆ ಎಂದರು.

34ಕ್ಕೂ ಅಧಿಕ ರೈತರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಒಂದು ಕೈಯಲ್ಲಿ ಪರಿಹಾರ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವ ಷಡ್ಯಂತ್ರ ಮಾಡುತಿದ್ದಾರೆ. ಪರಿಹಾರ ವಾಪಸ್ಸು ಪಡೆದುಕೊಳ್ಳಲು ಅದರದೆ ಆದ ಕಾಯ್ದೆ ಇದೆ. ಅದನ್ನು ಬಿಟ್ಟು ಪೊಲೀಸ್‌ರಿಂದ ನೋಟಿಸ್ ಕಳುಹಿಸಿ ರೈತರನ್ನು ಹೆದರಿಸುವ ತಂತ್ರ ಅನುಸರಿಸುತಿದ್ದಾರೆ ಎಂದು ದೂರಿದರು.

ಅಧಿಕಾರಿಗಳು ಇದನ್ನು ಕೂಡಲೇ ಸರಿಪಡಿಸಿಕೊಂಡು ರೈತರಿಗೆ ನಿತ್ಯ ಆಗುತ್ತಿರುವ ಕಿರುಕುಳವನ್ನು ನಿಲ್ಲಿಸಬೇಕು ಇರದಿದ್ದರೆ, ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲ್ಲಿ ಬಾಬಾಗೌಡ ಪಾಟೀಲ, ಸುಭಾಸ ಪಾಟೀಲ, ರಮೇಶ ಪಾಟೀಲ, ಗಿರಮಲ್ಲಪ್ಪ ಅಂಬಿ, ಗುರುಪಾದ ಕುಂಚನೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net