ಮಧುರ ಬಾಂಧವ್ಯದ ಮೆಲುಕು ಚಿಗಳಿ

A sweet reminder of a sweet relationship.
ಬನಹಟ್ಟಿಯ ಶಾಂತಾ ಈ. ಸೋರಗಾಂವಿ ಅವರ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಪುಸ್ತಕಾವಲೋಕನ-39 ಕಾರ್ಯಕ್ರಮದಲ್ಲಿ ಸಾಹಿತಿ ಚಂದ್ರಪ್ರಭಾ ಬಾಗಲಕೋಟ ಅವರನ್ನು ಗೌರವಿಸಲಾಯಿತು. ಶಾಂತಾ ಸೋರಗಾಂವಿ, ಮ.ಕೃ. ಮೆಗಾಡಿ, ಮಲ್ಲಿಕಾರ್ಜುನ ಹುಲಗಬಾಳಿ ಇದ್ದರು.
Published on

ರಬಕವಿ/ಬನಹಟ್ಟಿ: ಹುಲಗಬಾಳಿ ಅವರ ಚಿಗಳಿ ಆತ್ಮಕಥಾನಕವು ವೈಯಕ್ತಿಕ ಬದುಕು, ವಿವಿಧ ಲೇಖಕರೊಂದಿಗಿನ ಒಡನಾಟ, ಮಧುರ ಬಾಂಧವ್ಯದ ಮೆಲುಕು ಒಳಗೊಂಡು ವಿನೂತನವಾಗಿ ಮೂಡಿಬಂದಿದೆ ಎಂದು ಬನಹಟ್ಟಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಚಂದ್ರಪ್ರಭಾ ಬಾಗಲಕೋಟ ಹೇಳಿದರು.

ಬನಹಟ್ಟಿಯ ಶ್ರೀ ದಾನೇಶ್ವರಿ ಮಹಿಳಾ ವಿದ್ಯುತ್ ಮಗ್ಗಗಳ ಸಹಕಾರಿ ಸಂಘದ ಅಧ್ಯಕ್ಷೆ ಶಾಂತಾ ಈ. ಸೋರಗಾಂವಿ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ , ತಾಲೂಕು ಘಟಕ ಹಾಗೂ ವಲಯಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪುಸ್ತಕಾವಲೋಕನ-39 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ದಾನೇಶ್ವರಿ ಮಹಿಳಾ ವಿದ್ಯುತ್ ಮಗ್ಗಗಳ ಸಹಕಾರಿ ಸಂಘದ ಅಧ್ಯಕ್ಷೆ ಶಾಂತಾ ಸೋರಗಾಂವಿ ಮಾತನಾಡಿ, ಪುಸ್ತಕಾವಲೋಕನ ಕಾರ್ಯಕ್ರಮ ತಮ್ಮ ನಿವಾಸದಲ್ಲಿ ಹಮ್ಮಿಕೊಂಡ ಸಂದರ್ಭದಲ್ಲಿ ಮಹಿಳಾ ಸಹಕಾರಿ ಸಂಘ ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿದ್ದು, ಕನ್ನಡ ಮನಸ್ಸುಗಳು, ಹಿರಿಯ ಸಾಹಿತಿಗಳು ತಮ್ಮ ನಿವಾಸಕ್ಕೆ ಆಗಮಿಸಿದ್ದು ಸಂತಸವನ್ನುಂಟು ಮಾಡಿದೆ ಎಂದರು. ಸಾಹಿತ್ಯ ಪರಿಷತ್‌ಗೆ ನೆರವು, ಸಹಕಾರ ನೀಡುವುದಾಗಿ ತಿಳಿಸಿದರು.

ತಾಲೂಕು ಕಸಾಪ ಅಧ್ಯಕ್ಷ ಮ.ಕೃ. ಮೇಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಮುಂದಿನ ವಾರಗಳಲ್ಲಿ ಜರುಗುವ ಯುಗಾದಿ ಕವಿಗೋಷ್ಠಿಯಲ್ಲಿ ಹಿರಿಯ ಸಾಹಿತಿಗಳೊಂದಿಗೆ ಕಾಲೇಜು ವಿದ್ಯಾರ್ಥಿಗಳಿಗೂ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು. ಏಪ್ರಿಲ್ ತಿಂಗಳ ಬೇಸಿಗೆ ರಜೆಯಲ್ಲಿ ಬನಹಟ್ಟಿಯಲ್ಲಿ ಏಳು ದಿನಗಳ ಗೀತಗಾಯನ ಶಿಬಿರ ಹಮ್ಮಿಕೊಳ್ಳಲು ಯೋಚಿಸಲಾಗಿದೆ ಎಂದರು.

ವಿನೋದ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ ಅವರ ಚಿಗಳಿ ಕೃತಿಯನ್ನು ಅವಲೋಕಿಸಲಾಯಿತು. ಡಾ. ಡಿ.ಎ. ಬಾಗಲಕೋಟ, ಮಲ್ಲಿಕಾರ್ಜುನ ಜವಳಗಿ, ಮಲ್ಲಿಕಾರ್ಜುನ ಹುಲಗಬಾಳಿ ಮಾತನಾಡಿದರು.

ಸಾಹಿತಿ ಚಂದ್ರಪ್ರಭಾ ಬಾಗಲಕೋಟ ಹಾಗೂ ರಾಜ್ಯ ಮಟ್ಟದ ವೀರರಾಣಿ ಕಿತ್ತೂರು ಚನ್ನಮ್ಮ ಪ್ರಶಸ್ತಿಗೆ ಭಾಜನರಾಗಿರುವ ಶಾಂತಾ ಸೋರಗಾಂವಿ ಅವರನ್ನು ಕಸಾಪದಿಂದ ಸನ್ಮಾನಿಸಲಾಯಿತು.

ಹಿರಿಯ ಸಾಹಿತಿಗಳಾದ ಬಿ.ಆರ್. ಪೊಲೀಸ್ ಪಾಟೀಲ, ಎಂ.ಎಸ್. ಬದಾಮಿ, ಶಿವಾನಂದ ಬಾಗಲಕೋಟಮಠ, ಶಿವಾನಂದ ದಾಶಾಳ, ಎಸ್.ಎಸ್. ಹಿರೇಮಠ, ಈರಣ್ಣ ಗಣಮುಖಿ, ಡಿ.ಬಿ. ಜಾಯಗೊಂಡ, ಮಹಾಶಾಂತ ಶೆಟ್ಟಿ, ಬಾಳು ಗಣೇಶನವರ, ಮಲ್ಲೇಶಪ್ಪ ಕುಚನೂರ, ಬ್ರಿಜ್ ಮೋಹನ್ ಡಾಗಾ, ಮೋಹನ್ ಪತ್ತಾರ, ಸುವರ್ಣಾ ಕೊಪ್ಪದ ಮತ್ತಿತರರಿದ್ದರು. ಹಿರಿಯ ಕಲಾವಿದ ಮಲ್ಲಪ್ಪ ಗಣಿ ಪ್ರಾರ್ಥಿಸಿದರು. ಕಸಾಪ ಮಹಾಲಿಂಗಪುರ ವಲಯ ಅಧ್ಯಕ್ಷ ಬಸವರಾಜ ಮೇಟಿ ಸ್ವಾಗತಿಸಿದರು. ಡಾ. ಚಂದ್ರಕಾಂತ ಹೊಸೂರ ನಿರೂಪಿಸಿದರು. ದಾನಪ್ಪ ಆಸಂಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net