ರೌಡಿಶೀಟರ್ ಮನೆಗಳ ದಿಢೀರ್ ತಪಾಸಣೆ

A surprise inspection of a rowdy's house
ಬಾಗಲಕೋಟೆ ಹಾಗೂ ನವನಗರ ವ್ಯಾಪ್ತಿಯ ರೌಡಿಶೀಟರ್ ಹಾಗೂ ಕಮ್ಯುನಲ್ ಗುಂಡಾಗಳ ಮನೆಗಳನ್ನು ಮಂಗಳವಾರ ತಪಾಸಣೆ ನಡೆಸಿದ ವೇಳೆ ಕೆಲವರ ಮನೆಗಳಲ್ಲಿ ಪತ್ತೆಯಾದ ಮಾರಕಾಸ್ತ್ರ ಹಾಗೂ ಕಳ್ಳಬಟ್ಟಿ ಜಪ್ತಿ ಮಾಡಿರುವ ಪೊಲೀಸರು. ನಗರ ಸಿಪಿಐ ನಾಗರೆಡ್ಡಿ, ನವನಗರ ಸಿಪಿಐ ಎಸ್.ಎಂ.ಅವಜಿ, ಅವಳಿ ಠಾಣೆಗಳ ಪಿಎಸ್ ಐ, ಪೊಲೀಸ್ ಸಿಬ್ಬಂದಿ ಇದ್ದಾರೆ.
Published on

ಬಾಗಲಕೋಟೆ : ಜಿಲ್ಲಾದ್ಯಂತ ಮಂಗಳವಾರ ಬೆಳ್ಳಂ ಬೆಳಗ್ಗೆ ರೌಡಿಶೀಟರ್ ಹಾಗೂ ಕಮ್ಯುನಲ್ ಗುಂಡಾಗಳ ಮನೆಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ.

ಮನೆಗಳ ತಪಾಸಣೆ ಮಾಡಿದಾಗ ಕೆಲ ಬಾಗಲಕೋಟೆ ಹಾಗೂ ನವನಗರದ ರೌಡಿಶೀಟರ್ ಗಳ ಮನೆಗಳಲ್ಲಿ ಎರಡು ತಲವಾರ್, ಚೂರಿ, ಚಾಕು, ಕೊಡಲಿ, ಕೊಯ್ತ, ಬೈಕ್ ಸೈರನ್ಸರ್ ಗಳು ಪತ್ತೆ ಆಗಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಾಗಲಕೋಟೆ ನಗರ ಸೇರಿದಂತೆ ಜಿಲ್ಲಾದ್ಯಂತ ಇತ್ತೀಚಿನ ದಿನಗಳಲ್ಲಿ ನಡೆದ ಕೆಲವು ಕೋಮು ಹಾಗೂ ಇತರೆ ಗಲಾಟೆಗಳ ಹಿನ್ನಲೆಯಲ್ಲಿ ಪೊಲೀಸರು ಈ ತಪಾಸಣೆಯನ್ನು ನಡೆಸಿದ್ದಾರೆ.

ಜಿಲ್ಲಾದ್ಯಂತ ಒಟ್ಟು 77 ರೌಡಿಶೀಟರ್ ಹಾಗೂ ಕಮ್ಯುನಲ್ ಗುಂಡಾಗಳ ಮನೆಗಳನ್ನು ತಪಾಸಣೆ ಮಾಡಿದ್ದಾರೆ. ಬಾಗಲಕೋಟೆ ಹಾಗೂ ನವನಗರ ವ್ಯಾಪ್ತಿಯಲ್ಲಿ 19 ಮನೆಗಳ ಮೇಲ ದಾಳಿ ನಡೆಸಿದ್ದಾರೆ.

ನವನಗರ ಮುರಳಿ ಚವ್ಹಾಣ ಎನ್ನುವವರ ಮನೆಯಲ್ಲಿ 16 ಲೀಟರ್ ಕಳ್ಳಬಟ್ಟಿ ಪತ್ತೆ ಆಗಿದ್ದು, ಅವರ ವಿರುದ್ದ ಊರು ದಾಖಲಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net