ಸುಕ್ರಜ್ಜಿ ಆರೋಗ್ಯದಲ್ಲಿ ಗುಣಮುಖ: ಆಸ್ಪತ್ರೆಯಿಂದ ಮನೆಗೆ ಕರೆದೊಯ್ದ ಕುಟುಂಬಸ್ಥರು

Sukrajji
Published on

ಮಂಗಳೂರು: ಪದ್ಮಶ್ರೀ ಪುರಸ್ಕೃತ ಹಾಲಕ್ಕಿ ಜಾನಪದ ಹಾಡುಗಾರ್ತಿ, ಪರಿಸರ ಮತ್ತು ಸಾಮಾಜಿಕ ಹೋರಾಟಗಾರ್ತಿ ಸುಕ್ರಿ ಬೊಮ್ಮ ಗೌಡ ಅವರು ಗುಣಮುಖರಾಗಿ ಮಂಗಳೂರಿನ ಕೆಯಂಸಿ

ಆಸ್ಪತ್ರೆಯಿಂದ ಶುಕ್ರವಾರ ಬಿಡುಗಡೆಯಾಗಿದ್ದಾರೆ. ಅಂಕೋಲಾ ಕಡೆಗೆ ಹೊರಟಿದ್ದಾರೆ.

ಮೂಲತ್ವ ಫೌಂಡೇಶನ್‌ನ ಪ್ರಕಾಶ್ ಕೋಟ್ಯಾನ್, ಕಲ್ಪನಾ ಕೋಟ್ಯಾನ್ ಹಾಗೂ ಸೊಸೆ ಮಂಗಳಾ ಮತ್ತು ಮಂಜುನಾಥ್ ಅವರು ಅಜ್ಜಿಯನ್ನು ಆಸ್ಪತ್ರೆಯಿಂದ ಅಂಕೋಲಾಕ್ಕೆ ತಮ್ಮದೇ ಕಾರಿನಲ್ಲಿ ಕರೆದುಕೊಂಡು ತೆರಳಿದ್ದಾರೆ.

ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಆರು ದಿನಗಳ ಹಿಂದೆ ಸುಕ್ರಿ ಬೊಮ್ಮ ಗೌಡ ಅವರು ನಗರದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net