

ಚಿಕ್ಕೋಡಿ: ಅತಿಥಿ ಉಪನ್ಯಾಸಕರಾಗಿ ಎಂಟು ವರ್ಷಗಳಿಂದ ನಿಪ್ಪಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ತಾಲೂಕಿನ ಬೆಳಕೂಡ ಗ್ರಾಮದ ಲಕ್ಷಿ$್ಮನಗರದ ನಿವಾಸಿ ಡಾ.ನೇಮಿನಾಥ ತಪಕೀರೆ ಸಕಾಲಕ್ಕೆ ಸರ್ಕಾರಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿಲ್ಲವೆಂದು ಆತ್ಮಬಲಿದಾನಕ್ಕೆ ಸಿದ್ಧನಿರುವುದಾಗಿ ಸೋಮವಾರ ರಾಜ್ಯಮಟ್ಟದ ಅತಿಥಿ ಉಪನ್ಯಾಸಕರ ವಾಟ್ಸಪ್ ಗ್ರೂಪನಲ್ಲಿ ಎರಡು ಪುಟಗಳ ಪತ್ರ ಬರೆದು ೋನ್ ಸ್ವೀಚ್&ಆ್ ಮಾಡಿಕೊಂಡ ಟನೆ ತಡವಾಗಿ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ಸಿದ್ಧನಿದ್ದು, ನನ್ನ ಸಾವಿಗೆ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಹಾಗೂ ಉನ್ನತ ಶಿಣ ಸಚಿವರೇ ಹೊಣೆಗಾರರು ಎಂದು ಬರೆದುಕೊಂಡಿದ್ದಾರೆ. ಬಂಧುಮಿತ್ರರಿಗೆ ಜಯವಾಗಲಿ. ಮೆ ಇರಲಿ ಮುದ್ದುಮಗಳೇ ಅಮ್ಮನ ಜತೆಗೆ ಖುಷಿಯಾಗಿರು. ನಿಮ್ಮಪ್ಪ ಮತ್ತೆ ಹುಟ್ಟಿ ರ್ಬತಾನೆ. ಇಂದು ಅತಿಥಿ ಉಪನ್ಯಾಸಕರು ಅತಂತ್ರರಾಗಿದ್ದು, ಬದುಕಿನ ಚಿಂತೆ ಕಾಡುತ್ತಿದೆ. ಕೆಸೆಟ್, ನೆಟ್, ಪಿಎಚ್.ಡಿ ಪಡೆದರೂ ಕಾಲಕಾಲಕ್ಕೆ ನೇಮಕಾತಿ ಮಾಡಿಕೊಳ್ಳದಿರುವುದರಿಂದ ಅತಿಥಿ ಉಪನ್ಯಾಸಕರಾಗಿದ್ದಾರೆ. ಕಾಯಂ ಉಪನ್ಯಾಸಕರಿಗಿಂತ ಉತ್ತಮವಾಗಿ ಪಾಠ ಮಾಡಿ ವಿದ್ಯಾರ್ಥಿಗಳಿಂದ ಮೆಚ್ಚುಗೆ ಪಡೆದುಕೊಂಡರೂ ಅಭದ್ರತೆ ಅನುಭವಿಸಬೇಕಾಗಿದೆ. ಶಿಣ ವ್ಯವಸ್ಥೆ ಹಾಳು ಮಾಡಿದರೆ ಸಾಕು ದೇಶ ಹಾಳಾಗುತ್ತದೆ ಎಂಬಂತೆ ಬಡಮಕ್ಕಳು ಓದುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಶೈಣಿಕ ಮಟ್ಟ ಕುಸಿಯುತ್ತಿರುವುದಕ್ಕೆ ಸರ್ಕಾರವೇ ಹೊಣೆಯಾಗಿದೆ. ನಮ್ಮ ಬದುಕು ಹಾಳಾದರೆ ವಿದ್ಯಾರ್ಥಿಗಳ ಬದುಕು ಹಾಳಾಗುತ್ತದೆ ಎಂದು ಸುದೀರ್ ಪತ್ರ ಬರೆದಿದ್ದಾರೆ. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅತಿಥಿ ಉಪನ್ಯಾಸಕರ ಹುಡಕಾಟ ನಡೆಸುತ್ತಿದ್ದಾರೆ.