

ಮಡಿಕೇರಿ:
ಗೌರಿ-ಗಣೇಶ ಹಬ್ಬದ ಅಂಗವಾಗಿ ಎರಡು ದಿನಗಳ ಕಾಲ ಕುಶಾಲನಗರದ ಜಂಪ್ ಸ್ಮಾಶ್ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಜಯರಾಜ್ ಹಾಗೂ ರಫೀಕ್ ಮಾಲೀಕತ್ವದ ಜಂಪ್ ಸ್ಮಾಶ್ ತಂಡ ಮೊದಲ ಬಹುಮಾನ 50 ಸಾವಿರ ರೂ. ಹಾಗೂ ಆಕರ್ಷಕ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿತು.
ಸೋಮು ಹಾಗೂ ನಿರಂಜನ್ ಮಾಲೀಕತ್ವದ ಗೋಲ್ಡನ್ ರಾಕೆಟ್ಸ್ ತಂಡ ದ್ವಿತೀಯ ಬಹುಮಾನ 30 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ಪಡೆದರೆ, ಕಾಫಿ ಮಹೇಶ್ ಮಾಲೀಕತ್ವದ ಕಾವೇರಿ ತಂಡ 20 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿಗೆ ತೃಪ್ತಿಪಟ್ಟಿತು.
ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಕಾಲ ನಡೆದ ಟೂರ್ನಿಯಲ್ಲಿ ಒಟ್ಟು ಏಳು ತಂಡಗಳ 91 ಆಟಗಾರರು ಹಣಾಹಣಿಯಲ್ಲಿ ಪಾಲ್ಗೊಂಡಿದ್ದರು. ಆಟಗಾರರಾದ ಶಿವು, ಆಕಾಶ್ ತಂಡ ಪಂದ್ಯಾವಳಿ ಆಯೋಜಿಸಿತ್ತು.