ನಿಮ್ಹಾನ್ಸ್​ನಲ್ಲಿ ಸ್ಟಡಿ ಕೋ-ಆರ್ಡಿನೇಟರ್​ ನೇಮಕ: ಉನ್ನತ ಪದವೀಧರರಿಗೆ ಅವಕಾಶ

nimhans
Published on

ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಲ್ಲಿ ಐದು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ಸ್ಟಡಿ ಕೋ-ಆರ್ಡಿನೇಟರ್​ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ/ ಇಂಜಿನಿಯರಿಂಗ್​/ ಮೆಡಿಸಿನ್​/ನರ್ಸಿಂಗ್​/ಸಮಾಜ ವಿಜ್ಞಾನದಲ್ಲಿ ಉನ್ನತ ಪದವಿ ಪಡೆದಿರಬೇಕು. ಹಿಂದಿ, ಇಂಗ್ಲಿಷ್​ ಭಾಷೆಯಲ್ಲಿ ಪ್ರಾವಿಣ್ಯತೆ ಇರಬೇಕು. 45 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. 31,000 ರೂ. ಮಾಸಿಕ ವೇತನದೊಂದಿಗೆ ಇತರ ಭತ್ಯೆ ಇರಲಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 10/4/2022

ಅಧಿಸೂಚನೆಗೆ: https://bit.ly/3qQ1Bvy

ಮಾಹಿತಿಗೆ: https://nimhans.ac.in/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net