

ಹಳಿಯಾಳ: ವಿದ್ಯಾರ್ಥಿಗಳ ಜೀವನವೇ ಒಂದು ಪಾಠ. ಅಂಕದ ಜತೆಗೆ ಅನುಭವ ಮತ್ತು ಜೀವನ ಶೈಲಿಯೂ ಮುಖ್ಯ ಎಂದು ಯಲ್ಲಾಪುರದ ವೈಟಿಎಸ್‌ಎಸ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಶ್ರೀರಂಗ ಕಟ್ಟಿ ಅಭಿಪ್ರಾಯಪಟ್ಟರು.
ಪಟ್ಟಣದ ಕೆಎಲ್‌ಎಸ್ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ 2023-24ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಪ್ರೇರಣಾ-2023 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಎಲ್‌ಎಸ್ ಕಾಲೇಜು ಪ್ರಾಚಾರ್ಯ ಡಾ. ಎಸ್.ಎಂ. ಗಲಿಗಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿರಂತರ ಅಧ್ಯಯನದಿಂದ ಸಾಧನೆ ಸಾಧ್ಯ ಎಂದರು. ವೇದಿಕೆಯಲ್ಲಿ ಕ್ರೀಡಾ ನಿರ್ದೇಶಕ ಮಲ್ಲಿಕಾರ್ಜುನ ಕಾಜಗಾರ, ಕಾಲೇಜು ಶೈಕ್ಷಣಿಕ ಸಂಯೋಜಕ ಶ್ರೀನಿವಾಸ ಪ್ರಭು, ಸಾಂಸ್ಕೃತಿಕ ಸಂಯೋಜಕ ನಿಫಾ ಮಾಸ್ಕರೇನಿಸ್ ಇದ್ದರು. ವಿದ್ಯಾರ್ಥಿಗಳಾದ ಗೌರಿ ಪಾಟೀಲ, ನೇಹಾ ನಾಯರ ಕಾರ್ಯಕ್ರಮ ನಿರ್ವಹಿಸಿದರು. ಸಾಕ್ಷಿ ಸಾಮಂತ ಭರತನಾಟ್ಯ ಪ್ರದರ್ಶಿಸಿದರು.