ಡಿಸಿ ಜತೆ ಸಿಟಿ ರೌಂಡ್ ಹೊಡೆದ ವಿದ್ಯಾರ್ಥಿ

DC
Published on

ಯಾದಗಿರಿ : ಜಿಲ್ಲಾ ಕಾರ್ಯಾಂಗದ ಮುಖ್ಯಸ್ಥರಾದ ಜಿಲ್ಲಾಕಾರಿಗಳ ನಿತ್ಯ ಕಾರ್ಯವೈಖರಿ ಹೇಗಿರುತ್ತದೆ? ಅವರ ನಿತ್ಯ ಕಾರ್ಯಾಲಾಪಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಜನಸಾಮಾನ್ಯರಲ್ಲಿ ಇರುವುದು ಸಹಜ.

ಎಡೆಬಿಡದ ಕೆಲಸಗಳ ಮಧ್ಯೆ ಡಿಸಿ ಅವರು ಸಾಮಾನ್ಯ ಜನತೆಗೆ 10 ನಿಮಿಷ ಸಮಯ ಕೊಟ್ಟರೆ ಅದೇ ದೊಡ್ಡದು. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಒಂದಿಡೀ ದಿನ ಜಿಲ್ಲಾಕಾರಿಗಳ ಜತೆ ಓಡಾಡಿ ಅವರ ಕೆಲಸ ಕಾರ್ಯಗಳ ಬಗ್ಗೆ ಸಮೀಪದಿಂದ ಕಾಣುವ ಅವಕಾಶ ಗಿಟ್ಟಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.

ಹೌದು, ತಾಲೂಕಿನ ಮುಂಡರಗಿ ಗ್ರಾಮದ ಬಿಕಾಂ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಭೀಮಾರಾಯ ಜಿಲ್ಲಾಕಾರಿ ಸ್ನೇಹಲ್ ಅವರೊಂದಿಗೆ ಮಂಗಳವಾರ ಇಡೀ ದಿನ ಸಂಚರಿಸಿ ಸಭೆ, ಸಮಾರಂಭ, ವಿಸಿಟ್ ಹೀಗೆ ಎಲ್ಲದರಲ್ಲೂ ಭಾಗಿಯಾಗಿ ಅಚ್ಚರಿ ಮೂಡಿಸಿದ. ಯುವ ಜನತೆಯಲ್ಲಿ ಕೌಶಲ ಅಭಿವೃದ್ಧಿಯ ಮಹತ್ವದ ಕುರಿತು ಜಾಗೃತಿ ಮೂಡಿಸಲು ಸರ್ಕಾರ ವಿಶ್ವ ಯುವ ಕೌಶಲ ದಿನದ ಅಂಗವಾಗಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಶಾಲಾ ಮಕ್ಕಳಿಗೆ 8 ರಿಂದ 12ನೇ ತರಗತಿಯವರೆಗೆ ಮತ್ತು ಕಾಲೇಜು ವಿದ್ಯಾರ್ಥಿ ಗಳಿಗೆ ಕೌಶಲ್ಯ ಮಹತ್ವದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಂ ಆಯೋಜಿಸಲಾಗಿತ್ತು.

ನಗರದ ಪದವಿ ಕಾಲೇಜಿನ ವಿದ್ಯಾರ್ಥಿ ಭೀಮರಾಯ ಸ್ಪದರ್ೆಯಲ್ಲಿ ಪ್ರಥಮ ಸ್ಥಾನ ಪಡೆದ ಕಾರಣ ಜಿಲ್ಲಾಕಾರಿಗಳೊಂದಿಗೆ ಒಂದು ದಿನ (ಡಿಸ್ಟಿಕ್ ಕಲೆಕ್ಟರ್ ಶಾಡೋವಿಂಗ್) ಕಾರ್ಯಕ್ರಮದಡಿ ಭಾಗವಹಿಸಲು ಚಾನ್ಸ್ ಗಿಟ್ಟಿಸಿಕೊಂಡಿದ್ದಾನೆ. ಜಿಲ್ಲಾಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಇಂದು ನಗರದ ತಹಸೀಲ್ದಾರ್ ಕಚೇರಿಗೆ ಡಿಸಿ ಭೇಟಿ ನೀಡಿ ಅಕಾರಿಗಳೊಂದಿಗೆ ಸಭೆ ನಡೆಸಿ ಪರಿಶೀಲಿಸಿ, ನಗರದಲ್ಲಿನ ಹಳೆ ಆಸ್ಪತ್ರೆಗೆ( ಹೆರಿಗೆ) ಭೇಟಿ ನೀಡಿ ಪರಿಶೀಲಿಸಿದರು, ನಂತರ ರಾಜೀವ್ ಗಾಂ ನಗರದಲ್ಲಿನ ಅಂಗನವಾಡಿ ಮತ್ತು ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಬೆರತು ಶಿಕ್ಷಣದ ಮಟ್ಟವನ್ನು ಪರೀಕ್ಷಿಸಿದರು.ಹಾಗೂ ಜಿಲ್ಲಾಕಾರಿಗಳ ಕಾರ್ಯಲಯದಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗಳಲ್ಲಿ ಭಾಗವಹಿಸಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಗಮನಿಸಿದ್ದಾನೆ.

ಭೀಮರಾಯ ಗಿಟ್ಟಿಸಿಕೊಂಡ ಅವಕಾಶ ಕಂಡು ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಹುಮ್ಮಸ್ಸು ಹೆಚ್ಚಾಗಿದ್ದು ಸುಳ್ಳಲ್ಲ. ತಾವೂ ಸಹ ಸ್ಪರ್ಧೆಯಲ್ಲಿ ಭಾಗವಹಿಸಿ ಈ ರೀತಿ ಅವಕಾಶ ಪಡೆದುಕೊಳ್ಳಬೇಕು ಎಂಬ ಆತುರತೆ ಹೆಚ್ಚಾಗಿದೆ. ಅಲ್ಲದೆ ಐಎಎಸ್, ಐಪಿಎಸ್ ಸೇರಿ ಉನ್ನತ ಹುದ್ದೆಗಳೇರಲು ಸಂಕಲ್ಪ ತೊಡುವ ನಿಧರ್ಾರಕ್ಕೆ ಬಂದಿರುವುದು ಸುಳ್ಳಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net