ವಿದ್ಯಾರ್ಥಿನಿಗೆ ಬೆತ್ತದಿಂದ ಹೊಡೆದು ಗಾಯ

Ksd_Student
Published on

ಕಾಸರಗೋಡು: ನಾಲ್ಕನೇ ತರಗತಿ ವಿದ್ಯಾರ್ಥಿನಿಗೆ ಬೆತ್ತದಿಂದ ಥಳಿಸಿ ಗಾಯಗೊಳಿಸಿದ ಟ್ಯೂಷನ್ ಶಿಕ್ಷಕಿ ವಿರುದ್ಧ ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಅಜನೂರ್ ನಿವಾಸಿ ಸೂರ್ಯಾ ಎಂಬುವರ ವಿರುದ್ಧ ಕೇಸು ದಾಖಲಾಗಿದೆ.

ಕಾಞಂಗಾಡು ಕರಾವಳಿ ಪ್ರದೇಶದ ನಾಲ್ಕನೇ ತರಗತಿ ವಿದ್ಯಾರ್ಥಿನಿಗೆ ಭಾನುವಾರ ಸಂಜೆ ಬೆತ್ತದಿಂದ ಹೊಡೆದಿದ್ದು, ಇದರಿಂದ ಗಾಯಗಳುಂಟಾಗಿತ್ತು. ಬಾಲಕಿಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಮಗುವಿನ ತಾಯಿ ಹಾಗೂ ಮನೆಯವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net