

ಕಿನ್ನಿಗೋಳಿ: ಉತ್ತಮ ಸಂಘಟನೆ ಮೂಲಕ ಸಮಾಜವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ಸೇವಾ ಕಾರ್ಯಕ್ರಮಗಳ ಮೂಲಕ ಸಂಸ್ಥೆಯನ್ನು ಮಾದರಿಯಾಗಿ ಬೆಳೆಸಬೇಕು ಎಂದು ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುಬ್ರಹ್ಮಣ್ಯ ಕೊರಿಯಾರ್ ಹೇಳಿದರು.
ಪುನರೂರು, ತೋಕೂರು, ಕೆರೆಕಾಡು ವಲಯದ ವಿಪ್ರ ಸಂಪದ ವತಿಯಿಂದ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ಕ್ಷಣ ಕ್ಷೇತ್ರದ ಸಾಧಕರಿಗೆ ಗೌರವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿಪ್ರ ಸಂಪದ ಅಧ್ಯಕ್ಷ ಸುಧಾಕರ ರಾವ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ವಾಡಿದ ಅರ್ಚನಾ ರಾವ್ ಕೆರೆಕಾಡು ಅವರನ್ನು ಗೌರವಿಸಲಾಯಿತು ಹಾಗೂ ನೂತನ ಅಧ್ಯಕ್ಷರು, ಪದಾಧಿಕಾರಿಗಳ ಆಯ್ಕೆ ನಡೆಯಿತು.
ಕೋಟಿ ಗಾಯತ್ರಿ ಜಪ ಯಜ್ಞದ ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ, ಯುಗಪುರುಷ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಹಿರಿಯರಾದ ಉದ್ಯಮಿ ಪಟೇಲ್ ರಾಮಮೂರ್ತಿ ರಾವ್, ಗೌರವಾಧ್ಯಕ್ಷ ಪಟೇಲ್ ವಾಸುದೇವ ರಾವ್, ಸ್ಥಾಪಕಾಧ್ಯಕ್ಷ ಸುರೇಶ್ ರಾವ್ ನೀರಳಿಕೆ, ಕಾರ್ಯದರ್ಶಿ ಚಂದ್ರಶೇಖರ್ ರಾವ್, ಕೋಶಾಧಿಕಾರಿ ಅವಿನಾಶ್ ರಾವ್, ಯುವ ವೇದಿಕೆ ಅಧ್ಯಕ್ಷ ಶಶಾಂಕ್ ಮುಚ್ಚಿಂತಾಯ ಮತ್ತಿತರರಿದ್ದರು. ಸುಧಾಕರ್ ರಾವ್ ಸ್ವಾಗತಿಸಿದರು. ಪ್ರಾಣೇಶ್ ಭಟ್ ದೇಂದಡ್ಕ ನಿರೂಪಿಸಿದರು. ಶಶಾಂಕ್ ಮುಚ್ಚಿಂತಾಯ ವಂದಿಸಿದರು.