ಸದೃಢ ಮನಸ್ಸು ವಿದ್ಯಾಭ್ಯಾಸಕ್ಕೆ ಸಹಕಾರಿ

Published on

ತಾವರಗೇರಾ: ಸದೃಢ ದೇಹ ಮತ್ತು ಮನಸ್ಸು ಇದ್ದರೆ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಲಿದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ಅರುಣ್ ಕುಮಾರ ಹೇಳಿದರು.

ನಗರದ ಮುರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹದಿಹರೆಯದ ಆರೋಗ್ಯ, ಕ್ಷೇಮ ದಿನಾಚರಣೆ ಹಾಗೂ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹದಿಹರೆಯದ ಮಕ್ಕಳು ಅನೇಕ ತೊಂದರೆಗೆ ಒಳಗಾಗಿದ್ದು, ಮಕ್ಕಳು ಪೌಷ್ಠಿಕ ಆಹಾರ ಸೇವನೆ, ವೈಯಕ್ತಿಕ ಸ್ವಚ್ಛತೆ, ಕಬ್ಬಿಣಾಂಶದ ಮಾತ್ರೆಗಳ ಸೇವನೆಯಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದರು.

ಆರೋಗ್ಯ ಇಲಾಖೆ ಆಪ್ತ ಸಮಾಲೋಚಕಿ ನಿರ್ಮಲಾ ಸಂಶಿ ಮಾತನಾಡಿ, ಋತುಚಕ್ರ, ಚರ್ಮ, ಅಪೌಷ್ಟಿಕ ಸಮಸ್ಯೆಗಳು, ಮಾನಸಿಕ ಖಿನ್ನತೆ, ಕಲಿಕಾ ಸಮಸ್ಯೆ, ಅತಿಯಾದ ಮೊಬೈಲ್ ಬಳಸುವುದರಿಂದ ಆರೋಗ್ಯ ಹಾಳಾಗುತ್ತದೆ. ಸಮುದಾಯ ಆರೋಗ್ಯ ಕೇಂದ್ರದ ಸ್ನೇಹ ಕ್ಲಿನಿಕ್‌ಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು. ಮಕ್ಕಳಿಗೆ ಟಿಡಿ ಲೆಸಿಕೆ ನೀಡಲಾಯಿತು.

ಮೆಣದಾಳ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಅನ್ವರ್ ಸಾಬ್, ಆರೋಗ್ಯಾಧಿಕಾರಿ ರಮೇಶ, ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ಮಂಜುಳಾ, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net