

ಗಜೇಂದ್ರಗಡ: ನರೇಂದ್ರ ಮೋದಿ ಇನ್ನೂ ಹತ್ತಾರು ವರ್ಷ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸಬೇಕು. ಇಡೀ ಪ್ರಪಂಚದಲ್ಲಿ ಭಾರತವನ್ನು ಸದೃಢ ದೇಶವನ್ನಾಗಿ ಮಾಡಲು ಅವರ ನಾಯಕತ್ವ ಅಗತ್ಯ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಅಭಿಪ್ರಾಯಪಟ್ಟರು.
ತಾಲೂಕಿನ ಮ್ಯಾಕಲಝರಿ ಗ್ರಾಮದಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ರೋಣ ಮಂಡಲ ಸೇವಾ ಪಾಕ್ಷಿಕ ಅಭಿಯಾನ ನಿಮಿತ್ತ ಸಸಿ ನೆಟ್ಟು ಅವರು ಮಾತನಾಡಿದರು.
ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಸೇವಾ ಚಟುವಟಿಕೆ ಮೂಲಕ ಜನ್ಮದಿನ ಆಚರಿಸುತ್ತಿರುವುದು ಸಂತಸದ ವಿಚಾರ. ಕೆರೆಕಟ್ಟೆಗಳನ್ನು ಪುನಃಶೇತನ ಮಾಡುವುದು, ರಕ್ತದಾನ, ಆರೋಗ್ಯ ತಪಾಸಣೆ ಸೇರಿ ಹತ್ತು ಹಲವಾರು ಕಾರ್ಯಗಳನ್ನು ಪಕ್ಷ ಹಮ್ಮಿಕೊಂಡಿದೆ ಎಂದರು.
ಬಿಜೆಪಿ ರೋಣ ಮಂಡಲ ಅಧ್ಯಕ್ಷ ಮುತ್ತು ಕಡಗದ ಮಾತಾನಾಡಿ, ಪ್ರಪಂಚದ ಇತರ ದೇಶಗಳು ಭಾರತದತ್ತ ನಿಬ್ಬೆರಗಾಗಿ ತಿರುಗಿನೋಡುವಂತೆ ಮೋದಿ ಮಾಡಿದ್ದಾರೆ. ಜನಸೇವೆ ಮೂಲಕ ಜನ್ಮದಿನ ಆಚರಿಸಬೇಕೆಂಬುದು ಅವರ ಬಯಕೆಯಾಗಿದ್ದು, ಅದರಂತೆ ದೇಶಾದ್ಯಂತ ವಿವಿಧ ಸೇವಾ ಕಾರ್ಯಗಳನ್ನು 15 ದಿನ ಹಮ್ಮಿಕೊಳ್ಳಲಾಗಿದೆ ಎಂದರು.
ರೋಣ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಉಮೇಶ ಮಲ್ಲಾಪುರ, ಮುದಿಯಪ್ಪ ಕರಡಿ, ಮಹಾಂತೇಶ ಪೂಜಾರ, ಅಂದಪ್ಪ ಅಂಗಡಿ, ಕೇಶಪ್ಪ ಪೂಜಾರ, ಮುತತ್ಯ್ಯ ಕಾರಡಗಿ, ಶಿವಾನಂದ ಕಟಿಗಾಲ, ಕಳಕಪ್ಪ ಅಗಸಿ, ಕೃಷ್ನ ಪೂಜಾರ, ಅಂಬರೀಶ ನಾಯಕ, ಪೂಮಪ್ಪ ಪೂಜಾರ, ಕಳಕನಗೌಡ ಪಾಟೀಲ, ಈರಣ್ಣ ಅಂಗಡಿ, ಶಾಂತಪ್ಪ ಸೊಬರದ, ಶರನಪ್ಪ ಕೊಡಗಾನೂರ ಇತರರು ಇದ್ದರು.