ಯೋಗದಿಂದ ಸದೃಢ ದೇಹ

A strong body with yoga
ವಿಜಯಪುರದ ಅಟಲ್​ ಬಿಹಾರಿ ವಾಜಪೇಯಿ ಶಾಲೆಯಲ್ಲಿ ನಡೆದ ವೈದ್ಯ ದಿನಾಚರಣೆಯಲ್ಲಿ ಡಾ. ರಾಜೇಶ್ವರಿ ಖೂಬಾ ಮಾತನಾಡಿದರು. ಬಸವರಾಜ ಸೂಗೂರ, ಐಶ್ವರ್ಯ ಸಂಗಮ ಇದ್ದಾರೆ.
Published on

ವಿಜಯಪುರ: ನಗರದ ಸಿದ್ಧೇಶ್ವರ ಸಂಸ್ಥೆಯ ಅಟಲ್​ ಬಿಹಾರಿ ವಾಜಪೇಯಿ ಶಾಲೆಯಲ್ಲಿ ಸೋಮವಾರ ವೈದ್ಯರ ದಿನ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಿರೋಗ ತಜ್ಞೆ ಡಾ.ರಾಜೇಶ್ವರಿ ಖೂಬಾ ಮಾತನಾಡಿ, ದೇಹವನ್ನು ಸದೃಢ ಹಾಗೂ ಉಲ್ಲಾಸದಿಂದ ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರ ಸೇವನೆ ಮತ್ತು ಯೋಗವನ್ನು ಅಳವಡಿಸುವ ಮೂಲಕ ಸಾಧ್ಯವಾಗಿದೆ.

ಪ್ರಾಚಾರ್ಯ ಐಶ್ವರ್ಯ ಸಂಗಮ ಮಾತನಾಡಿ, ದೇಹದಲ್ಲಿ ಅನಾರೋಗ್ಯ ಉಂಟಾದಾಗ ರ್ನಿಲಕ್ಷಿಸದೆ ತಕ್ಷಣ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ನಿರ್ದೇಶಕ ಬಸವರಾಜ ಸೂಗೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ನಡೆದ ಸಕಾರ್ಯಕ್ರಮದಲ್ಲಿ ಮಕ್ಕಳು ನೃತ್ಯ ಮತ್ತು ಭಾಷಣ ಮೂಲಕ ವೈದ್ಯ ದಿನಾಚರಣೆ ಅರಿವು ಮೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net