ಪರಿಸರದ ಮಹತ್ವ ಸಾರಿದ ಬೀದಿ ನಾಟಕ

8-ANP-P3
ಕೆಪಿಎಸ್ ಶಾಲಾ ಆವರಣದಲ್ಲಿ ಪೊಡವಿಯ ಕೊಡವಿದರೆ ಬೀದಿ ನಾಟಕ ಪ್ರದರ್ಶಿಸಲಾಯಿತು.
Published on

ಆನಂದಪುರ: ಇಲ್ಲಿನ ಕೆಪಿಎಸ್ ಶಾಲಾ ಆವರಣದಲ್ಲಿ ಗುರುವಾರ ಹೆಗ್ಗೋಡಿನ ಕೆ.ವಿ.ಸುಬ್ಬಣ್ಣ ರಂಗ ಸಮೂಹದಿಂದ ಪರಿಸರ ಸಂರಕ್ಷಣೆ ಮಹತ್ವ ಸಾರುವ ಪೊಡವಿಯ ಕೊಡವಿದರೆ ಬೀದಿ ನಾಟಕ ಪ್ರದರ್ಶನ ನಡೆಯಿತು. ಪ್ರಸ್ತುತ ದಿನಗಳಲ್ಲಿ ಎದುರಿಸುತ್ತಿರುವ ಪರಿಸರದ ಏರು ಪೇರುಗಳು ಮತ್ತು ದುಷ್ಪರಿಣಾಮಗಳ ಕುರಿತ ತಾತ್ವಿಕ ಅಂಶಗಳನ್ನೊಳಗೊAಡ ನಾಟಕ ಪ್ರೇಕ್ಷರ ಮನಸೂರೆಗೊಳಿಸಿತು. ನಾಟಕವನ್ನು ಹೆಗ್ಗೋಡಿನ ಯೇಸು ಪ್ರಕಾಶ ರಚಿಸಿ, ನಿರ್ದೇಶಿಸಿದ್ದಾರೆ. ಕಲಾವಿದರಾದ ಪ್ರಸನ್ನ ಹುಣಸೆಕೊಪ್ಪ, ಶ್ರೀಪಾದ ಭಾಗವತ್, ಕೃಷ್ಣಕುಮಾರ ಖಂಡಿಕ, ಗಣಪತಿ ನಂದಿತಳೆ, ಕುಮಾರ್ ದೊಂಬೆಕೊಪ್ಪ, ಶ್ರೀಧರ ಭಾಗವತ್ ಪಾಲ್ಗೊಂಡಿದ್ದರು. ಆನಂದಪುರ ಗ್ರಾಪಂ ಅಧ್ಯಕ್ಷ ಮೋಹನ್ ಕುಮಾರ್ ಉದ್ಘಾಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net