

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಭಾರತಿನಗರದಲ್ಲಿ ಪ್ರತ್ಯೇಕ್ಷವಾಗಿದೆ ಎಂಬ ವದಂತಿಗೆ ಅರಣ್ಯಾಧಿಕಾರಿಗಳು ತೆರೆ ಎಳೆದಿದ್ದಾರೆ.
ಶನಿವಾರ ತಡರಾತ್ರಿ ಭಾರತಿನಗರದ ಜನನಿಬಿಡ ಪ್ರದೇಶದಲ್ಲಿ ಚಿರತೆ ಅಡ್ಡಾಡಿದೆ ಎಂಬ ಮಾಹಿತಿ ಹರಿದಾಡಿತ್ತು. ಆಹಾರ ಡೆಲಿವರಿ ಬಾಯ್ ಕೂಡ ತನ್ನ ಕಣ್ಣಿಗೆ ಬಿದ್ದಿದೆ ಎಂದು ಹೇಳಿದ್ದ. ಇದರ ಬೆನ್ನು ಬಿದ್ದ ಅರಣ್ಯಾಧಿಕಾರಿಗಳು, ಸ್ಥಳ ಪರಿಶೀಲನೆ ಮಾಡಿದ್ದಾರೆ.
ಸಿಸಿ ಕ್ಯಾಮರಾ ದೃಶ್ಯಾವಳಿ ಸಂಗ್ರಹಿಸಿದ್ದ ಜನರು, ಚಿರತ ಓಡಾಡಿದೆ. ನಾವು ಇಲ್ಲಿ ಓಡಾಡಲು ಹೆದರುವಂತಾಗಿದೆ ಎಂದು ಹೆದರಿದ್ದಾರೆ. ಸ್ಥಳೀಯರ ಮಾಹಿತಿ ಸಂಗ್ರಹಿಸಿ ಆಗಮಿಸಿದ್ದ ಅರಣ್ಯಾಧಿಕಾರಿಗಳು, ಇಲ್ಲಿ ಚಿರತೆ ಓಡಾಡಿಲ್ಲವೆಂದು ಸಾರ್ವಜನಿಕರಿಗೆ ತಿಳಿಹೇಳಿದ್ದಾರೆ.
ಹುಬ್ಬಳ್ಳಿ ಆರ್‌ಎಫ್‌ಒ ಆರ್.ಎಸ್. ಉಪ್ಪಾರ ‘ವಿಜಯವಾಣಿ’ಯೊಂದಿಗೆ ಮಾತನಾಡಿ, ಇಲ್ಲಿ ಸೀಳು ನಾಯಿ ಇಲ್ಲವೇ ಕಾಡು ಬೆಕ್ಕು ಓಡಾಡಿರಬಹುದು. ಚಿರತೆ ಇಲ್ಲಿ ಓಡಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.