ಕಾಪು ಬಜರಂಗದಳ ಸಂಚಾಲಕನ ಮನೆಗೆ ಮಾರಕಾಸ್ತ್ರದೊಂದಿಗೆ ಆಗಮಿಸಿದ ಅಪರಿಚಿತರು!

Crime
Published on

ಪಡುಬಿದ್ರಿ: ಕಾಪು ಪ್ರಖಂಡ ಬಜರಂದದಳ ಸಂಚಾಲಕ ಕಲ್ಲುಗುಡ್ಡೆ ಸುಧೀರ್ ಸೋನು ಎಂಬುವರ ಮನೆಗೆ ಭಾನುವಾರ ಇಬ್ಬರು ಅಪರಿಚಿತರು ಬಂದು ನಿಮ್ಮ ಬಳಿ ಮಾತನಾಡಲಿದೆ. ಆಸಿಫ್ ಎಂಬುವವರು ನಿಮ್ಮನ್ನು ಕಾರಿನಲ್ಲಿ ಕಾಯುತ್ತಿದ್ದಾರೆ ಎಂದು ತಿಳಿಸಿದ್ದು, ಇದರಿಂದ ಭಯಗೊಂಡ ಸುಧೀರ್ ಅವರ ಜತೆ ತೆರಳಲು ನಿರಾಕರಿಸಿದ್ದು, ಕಾಪು ಠಾಣೆಗೆ ದೂರು ನೀಡಿದ್ದಾರೆ.

ಮನೆಗೆ ಬಂದಿದ್ದ ಅಪರಿಚಿತ ಯುವಕರ ಚಲನವಲನಗಳಿಂದ ಅನುಮಾನಗೊಂಡ ಸುಧೀರ್ ಮತ್ತು ಅವರ ಪತ್ನಿ ಅವರ ಜತೆ ತೆರಳಲು ನಿರಾಕರಿಸಿದ್ದರು. ಅಲ್ಲದೆ, ಅಪರಿಚಿತರು ಹಿಂತಿರುಗಿ ಹೋಗುವಾಗ ಅವರ ಬಳಿ ಇದ್ದ ಆಯುಧಗಳನ್ನು ಗಮನಿಸಿದ ಸುಧೀರ್‌ಸೋನು ಕೂಡಲೇ ಕಾಪು ಠಾಣೆಗೆ ದೂರು ನೀಡಿದ್ದಾರೆ.

ದೂರು ಸ್ವೀಕರಿಸಿದ ಪೋಲಿಸರು ಆಸಿಫ್ ಎಂಬಾತನನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿ ಮುಚ್ಚಳಿಕೆ ಬರೆಸಿಕೊಂಡು ಪ್ರಕರಣವನ್ನು ಶಿರ್ವ ಠಾಣೆಗೆ ವರ್ಗಾಯಿಸಿದ್ದಾರೆ. ಸಾಲ ಕೇಳುವ ಸಲುವಾಗಿ ಸುಧೀರ್ ಮನೆಗೆ ಹೋಗಿದ್ದು, ಬೇರಾವುದೇ ಉದ್ದೇಶದಿಂದ ಅಲ್ಲ ಎಂದು ವಿಚಾರಣೆ ವೇಳೆ ಆಸಿಫ್ ತಿಳಿಸಿದ್ದಾಗಿ ಕಾಪು ಠಾಣಾಧಿಕಾರಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net