

ಧಾರವಾಡ: ನಗರದ ಶ್ರೀಮತಿ ವಿದ್ಯಾ ಪಿ. ಹಂಚಿನಮನಿ ಅಂತಾರಾಷ್ಟ್ರೀಯ ಶಾಲೆಯ ಮಕ್ಕಳು ಇತ್ತೀಚೆಗೆ ಗಾಂಧಿ ಮತ್ತು ಶಾಸ್ತಿ ್ರ ಜಯಂತಿ ಆಚರಿಸಿದರು. ಗಣ್ಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನೆರವೇರಿಸಿ ಧ್ಯಾನ, ಭಜನೆ, ಹಾಡು, ಭಾಷಣ ಮೊದಲಾದ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳೇ ನಡೆಸಿಕೊಟ್ಟರು.
ಅತಿಥಿಯಾಗಿ ಪಾಲ್ಗೊಂಡಿದ್ದ ಯೋಗಗುರು ಅಭಿಷೇಕ ಬಾರಕೇರ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಯೋಗವನ್ನು ರೂಢಿಸಿಕೊಂಡರೆ ಜೀವನ ಅತ್ಯಂತ ಸುಖಕರವಾಗುತ್ತದೆ. ಚಿತ್ತಶುದ್ಧಿ ಎಲ್ಲ ಬಗೆಯ ಸಾಧನೆಗಳನ್ನು ಸುಲಭವಾಗಿ ಮಾಡಲು ಸಾಧ್ಯ ಎಂದರು. ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು.
ಪ್ರಾಚಾರ್ಯ ವಿದ್ವಾನ್ ನವೀನ್ ಭಟ್ ಮಾತನಾಡಿ, ಗಾಂಧಿ ಮತ್ತು ಶಾಸ್ತಿ ್ರ ಅವರ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಅಂದಾಗ ನಾವು ಅವರಂತೆ ಜಗತ್ತಿಗೇ ಮಾದರಿಯಾಗಬಲ್ಲೆವು ಎಂದರು.
`ಏಕ್ ಕದಂ ಸ್ಪಚ್ಛತಾ ಕೇ ಓರ್' (ಸ್ವಚ್ಛತೆಯೆಡೆಗೆ ಒಂದು ಹೆಜ್ಜೆ) ಎಂಬ ಮಾಸಿಕ ಶೀರ್ಷಿಕೆಯಡಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ನುಗ್ಗಿಕೇರಿಯ ಶ್ರೀ ಹನುಮಂತ ದೇವರ ಗುಡಿಯ ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸಿದರು. ಏಕಬಳಕೆಯ ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು. ಜಾಗೃತಿ ಸಂದೇಶಗಳ ಘೋಷವಾಕ್ಯಗಳನ್ನು ಕೂಗುತ್ತ ಸಾಗಿದರು.