ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ಧರಣಿ

HND 29-1
ಹುನಗುಂದ ಸಾರಿಗೆ ಬಸ್ ನಿಲ್ದಾಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಾರಿಗೆ ನೌಕರರ ಸಂಘಟನೆ ಅಧ್ಯಕ್ಷ ಬಿ.ವಿ. ಕುಲಕರ್ಣಿ ಮಾತನಾಡಿದರು. ಅಶೋಕ ಬಜಂತ್ರಿ, ಜಿ.ಎಸ್. ಮಹೇಂದ್ರಕರ ಇತರರಿದ್ದರು.
Published on

ಹುನಗುಂದ: ಸಾರಿಗೆ ನೌಕರರ ನ್ಯಾಯಯುತ ವಿವಿಧ ಬೇಡಿಕೆಗಳನ್ನು 2024 ಡಿ. 31 ರೊಳಗೆ ಈಡೇರಿಸಬೇಕೆಂದು ಒತ್ತಾಯಿಸಿ ಕರರಾಸಾ ನಿಗಮಗಳ ಕಾರ್ಮಿ ಸಂಘಟನೆಗಳ ಜಂಟಿಕ್ರಿಯಾ ಸಮಿತಿ ರಾಜ್ಯಾದ್ಯಂತ ಮುಷ್ಕರ ನಡೆಯಲಿದೆ ಎಂದು ಸಾರಿಗೆ ನೌಕರರ ಸಂಘಟನೆ ಅಧ್ಯಕ್ಷ ಬಿ.ವಿ. ಕುಲಕರ್ಣಿ ಹೇಳಿದರು.

ಪಟ್ಟಣದ ಬಸ್ ನಿಲ್ದಾಣ ಬಳಿಯ ಹುನಗುಂದ ಬಸ್ ಘಟಕದ ಮುಂದೆ ಭಾನುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಕೊನೇ ವಾರದಿಂದ ಅನಿದಿಷ್ಟ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಬೆಳಗಾವಿ ಅಧಿವೇಶನದಲ್ಲಿ ಡಿ. 9 ರಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಇಲ್ಲಿಯವರೆಗೂ ನಮ್ಮೊಂದಿಗೆ ಚರ್ಚೆ ನಡೆಸಿಲ್ಲ. ಸರ್ಕಾ ಒಡಂಬಡಿಕೆ ಮೂಲಕ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಆದರೆ, ಬೇಡಿಕೆಗಳ ಈಡೇರಿಕೆಗೆ ಯಾವುದೇ ಸ್ಪಂದನೆ ಸಿಗದಿದ್ದರೆ ರಾಜ್ಯಾದ್ಯಾಂತ ಕರ್ತವ್ಯಕ್ಕೆ ಗೈರು ಉಳಿದು ಧರಣಿ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.

ನೌಕರರ ಬಾಕಿ ವೇತನ ಮತ್ತು ಪರಿಷ್ಕರಣೆ ಅನ್ವಯದಂತೆ ಕಡ್ಡಾಯವಾಗಿ ಪಾವತಿಸುವ ಸಲುವಾಗಿ ಈ ಮುಷ್ಕರ ನಡಸಾಗುವುದೆಂದು ತಿಳಿಸಿದರು.

ಮಹಾ ಮಂಡಳಿ ಅಧ್ಯಕ್ಷ ಸಿ.ಬಿ. ಕಾಚಟ್ಟಿ ಮಾತನಾಡಿ, ನ್ಯಾಯಯುತ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಈಗಾಗಲೇ ವರ್ಷದಿಂದ ಮನವಿಗಳನ್ನು ಸಲ್ಲಿಸಿ ತಾಳ್ಮೆಯಿಂದ ಶಾಂತಿಯುತ ಧರಣಿ, ಸಮಾವೇಶ, ಉಪವಾಸ ಮತ್ತು ಸತ್ಯಾಗ್ರಹಗಳನ್ನು ನಡೆಸಲಾಗಿದೆ. ಮುಷ್ಕರದಿಂದ ಸಾರ್ವಜನಿಕರಿಗೆ ಆಗವ ತೊಂದರೆಗೆ ನಮ್ಮ ಸಂಘಟನೆ ಕ್ಷಮೆ ಯಾಚಿಸುತ್ತದೆ ಎಂದರು. ಅಶೋಕ ಬಜಂತ್ರಿ, ಜಿ.ಎಸ್. ಮಹೇಂದ್ರಕರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net