

ಮೊಳಕಾಲ್ಮೂರು: ದೇವರಾಜ ಅರಸು ತಮ್ಮ ಆಡಳಿತಾವದಿಯಲ್ಲಿ ಪ್ರಗತಿಪರವಾಗಿ ಮುತ್ಸದ್ದಿತನ ಮೆರೆಯುತ್ತ ಶೋಷಿತ ಸಮಾಜಕ್ಕೆ ಸಾಮಾಜಿಕ ನ್ಯಾಯಕೊಡಿಸಿದ ದೀಮಂತ ನಾಯಕ ಎಂದು ಪಶುವೈದ್ಯಾಧಿಕಾರಿ ಡಾ. ಕೆ.ರಂಗಪ್ಪ ಗುಣಗಾನ ಮಾಡಿದರು.
ತಾಲೂಕು ಆಡಳಿತ ಸೌಧದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅರಸು ಜನ್ಮದಿನಾಚರಣೆಯಲ್ಲಿ ಮಾತನಾಡಿದರು.
ಅರಸು ರಾಜಕೀಯ ಕ್ಷೇತ್ರವನ್ನು ಸ್ವಹಿತಕ್ಕೆ ಎಂದೂ ಬಳಸಲಿಲ್ಲ. ಪಕ್ಷಾತೀತವಾಗಿ ಜನ ಸೇವೆಯೇ ಜನಾರ್ಧನ ಸೇವೆ ಎಂದು ಕಾಳಜಿ ಹೊಂದಿದ್ದ ನಾಯಕ ಎಂದರು.
ರೈತ ಕಲ್ಯಾಣಕ್ಕಾಗಿ ಭೂ ಸುಧಾರಣೆ, ಹಿಂದುಳಿದ ವರ್ಗಗಳ ಏಳಿಗೆ, ಬಡ ಮಕ್ಕಳ ಶಿಕ್ಷಣದ ಪ್ರಗತಿಗೆ ಶ್ರಮಿಸಿದರು. ಅನೇಕ ರೀತಿಯ ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೊಳಿಸಿದ ಅಪರೂಪದ ರಾಜಕಾರಣಿ ಎಂದು ಹೇಳಿದರು.
ಶಿರಸ್ತೇದಾರ ಏಳುಕೋಟಿ, ಬಿಸಿಎಂ ಇಲಾಖೆ ವಿಸ್ತರ್ಣಾಧಿಕಾರಿ ರುದ್ರಮುನಿ, ರಂಗನಾಥ, ಪ್ರಸನ್ನಕುಮಾರ, ಮಲ್ಲಿಕಾರ್ಜುನ, ಮಲ್ಲಮ್ಮ, ಸಂದೇಶ್, ಮಂಜುನಾಥ, ತಿಪ್ಪೇಸ್ವಾಮಿ ಬೋರಮ್ಮ ಇದ್ದರು.