ಸಮಾಜವನ್ನು ಒಗ್ಗೂಡಿಸಲು ಕ್ರೀಡಾ ಉತ್ಸವದಿಂದ ಸಾಧ್ಯ

gowda cricket
Published on

ಮಡಿಕೇರಿ: ಸಮಾಜವನ್ನು ಒಗ್ಗೂಡಿಸಲು ಕ್ರೀಡಾ ಉತ್ಸವದಿಂದ ಸಾಧ್ಯ ಎಂದು ಮಾಜಿ ವಿರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಕೊಂಬಾರನ ಬೋಪಯ್ಯ ಹೇಳಿದರು.


ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಆರಂಭವಾದ ಜಿಪಿಎಲ್(ಗೌಡ ಲೆದರ್ ಬಾಲ್ ಪ್ರೀಮಿಯರ್ ಲೀಗ್)ನ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಜಿಲ್ಲೆಯ ಎಲ್ಲೆಡೆ ಇಂದು ಸಮಾಜವನ್ನು ಒಗ್ಗೂಡಿಸಲು ಕ್ರೀಡಾ ಉತ್ಸವದಿಂದ ಸಾಧ್ಯ. ಇದು ನಿರಂತವಾಗಿ ಮುಂದುವರೆಯಲಿ. ಪ್ರತಿಭೆಯನ್ನು ಗುರುತಿಸಲು ಕೂಡ ಸಹಕಾರಿ ಎಂದರು.


ಕಾರ್ಯದರ್ಶಿ ಪುದಿನೆರವನ ರಿಶಿದ್ ಮಾದಯ್ಯ ಮಾತನಾಡಿ, ೨೩ ವರ್ಷಗಳ ಕಾಲ ಟೆನ್ನಿಸ್ ಬಾಲ್ ಕ್ರಿಕೆಟ್ ಆಯೋಜನೆ ಮಾಡಲಾಗುತ್ತಿತ್ತು. ಇದರಿಂದ ಪ್ರತಿಭೆಗಳಿಗೆ ಏಳಿಗೆ ಇರಲಿಲ್ಲ. ಪ್ರತಿಭೆಗಳಿಗೆಗಾಗಿ ಲೆದರ್ ಬಾಲ್ ಕ್ರಿಕೆಟ್ ಆರಂಭಿಸಲಾಗುತ್ತಿದೆ. ಆರಂಭದಲ್ಲಿ ೮ ತಂಡಗಳಿತ್ತು. ಇಂದು ೧೦ ತಂಡಕ್ಕೆ ತಲುಪಿದೆ. ಗ್ರಾಮಗಳಿಂದ ಹೆಚ್ಚಿನ ತಂಡಗಳು ಆಗಮಿಸಿದ್ದಲ್ಲಿ ಕುಟುಂಬವಾರು ಕ್ರೀಡಾಕೂಟ ಆಯೋಜನೆ ಮಾಡಲಾಗುವುದು. ಇದರಿಂದ ತಮ್ಮ ಮಕ್ಕಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.


ಏ.೨೩ ರವರೆಗೆ ಲೀಗ್ ಪಂದ್ಯಾಟ ನಡೆಯಲಿದೆ. ೨೮ಕ್ಕೆ ಮಹಿಳೆಯರಿಗೆ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಏ.೨೮ರಂದು ನೃತ್ಯ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ಗೌಡ ನಟರಾಜಾ ಪುರಸ್ಕಾರ ನೀಡಲಾಗುವುದು ಎಂದರು.


ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಮಾತನಾಡಿ, ಆರಂಭದಲ್ಲಿ ಕುಟುಂಬವಾರು ಕ್ರೀಡಾಕೂಟ ನಡೆಯುತ್ತಿತ್ತು. ಕ್ರೀಡಾಕೂಟದಲ್ಲಿ ಬದಲಾವಣೆ ಕೂಡ ಅಗತ್ಯವಿದೆ. ಅದರಂತೆ ಜನಾಂಗದ ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಟೆನ್ನಿಸ್ ಬಾಲ್‌ನಿಂದ ಲೆದರ್ ಬಾಲ್ ಪಂದ್ಯಾಟ ಆಯೋಜನೆ ಮಾಡಲಾಗುತ್ತಿದೆ. ಇದು ಶ್ಲಾಘನೀಯ ಎಂದರು.


ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಏ.೧೭ ರಿಂದ ಏ.೨೮ರವರೆಗೆ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ಈ ಬಾರಿ ಮೊದಲ ಬಾರಿಗೆ ಮಹಿಳೆಯರಿಗಾಗಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು, ಲೆದರ್ ಬಾಲ್ ಪಂದ್ಯಾಟದ ೧೦ ತಂಡದ ಮಾಲೀಕರಿಗೂ ಮತ್ತು ಆಟಗಾರರಿಗೆ ಶುಭಕೋರಿದರು.


ಕಾರ್ಯಕ್ರಮದಲ್ಲಿ ಕನಾರ್ಟಕ ಅರೆಭಾಷೆ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷ ಅಮೆ ದಮಯಂತಿ, ಗೌಡ ಯುವ ವೇದಿಕೆ ನಿಕಟ ಪೂರ್ವ ಅಧ್ಯಕ್ಷ ಪೈಕೇರ್ ಮನೋಹರ್ ಮಾದಪ್ಪ, ರಣಜಿ ಆಟಗಾರ ಸುಳ್ಯಕೋಡಿ ರಿಶಿ ಬೋಪಣ್ಣ ಹಾಗೂ ಯುವ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿನೋದ್ ಮೂಡಗದ್ದೆ ನಿರೂಪಿಸಿದರೆ, ಕಾಂಚನಗೌಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net