

ವಿಜಯವಾಣಿ ಸುದ್ದಿಜಾಲ ಗುಬ್ಬಿ
ಒಂದು ರಾಷ್ಟ್ರ ಅಭಿವೃದ್ಧಿಯಾಗಬೇಕು ಎಂದರೆ ಆ ದೇಶಕ್ಕೆ ವಿಶೇಷ ಯೋಜನೆಗಳ ಅವಶ್ಯಕತೆ ಇದೆ. ಯಾವುದೇ ಒಂದು ದೇಶದ ಅಭಿವೃದ್ಧಿಯನ್ನು ಸಂಪತ್ತು ಹಾಗೂ ಆರ್ಥಿಕತೆಯಿಂದ ನೋಡಲು ಸಾಧ್ಯವಿಲ್ಲ. ಆ ದೇಶದಲ್ಲಿರುವ ಶಿಣ, ಆರೋಗ್ಯ, ಮೂಲ ಸೌಲಭ್ಯ, ಜನರ ಜೀವನದ ಗುಣಮಟ್ಟ ನೋಡಿ ಅಭಿವೃದ್ಧಿ ಅಳೆಯಬೇಕು ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಯೋಗಿ ಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ನಿಟ್ಟೂರಿನಲ್ಲಿ ರೋಟರಿ ಕ್ಲಬ್ ನಿಟ್ಟೂರು ವತಿಯಿಂದ ಪದವಿ ಪೂರ್ವ ಕಾಲೇಜಿನ ಮಕ್ಕಳಿಗೆ ಮಧ್ಯಾಹ್ನದ ಅನ್ನದಾಸೋಹ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತ ದೇಶವು ಸಹ ಆರೋಗ್ಯ ಮತ್ತು ಆಹಾರದ ವಿಚಾರದಲ್ಲಿ ಗುಣಮಟ್ಟವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಬಹುತೇಕ ಕಾಯಿಲೆಗಳ ಹಿಂದೆ ಅಪೌಷ್ಟಿಕತೆ ಕಾಡುತ್ತಿದ್ದು, ಅನೀಮಿಯಾ ಕಾಯಿಲೆಯಿಂದ ಸಾಕಷ್ಟು ಜನತೆ ನರಳುತ್ತಿರುವ ವರದಿಗಳು ಸಿಕ್ಕಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಪೌಷ್ಟಿಕತೆ ಹೋಗಲಾಡಿಸಲು ಹಲವು ಯೋಜನೆಗಳನ್ನು ಜಾರಿ ಮಾಡಿವೆ. ಪೌಷ್ಟಿಕ ಸಪ್ತಾಹ ದಂತ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಶಿಶುಗಳಿಗೆ, ಮಹಿಳೆಯರಿಗೆ ಗರ್ಭಿಣಿಯರಿಗೆ ಎಲ್ಲರಿಗೂ ವಿಶೇಷ ಸೌಲಭ್ಯಗಳನ್ನು ಸಹ ನೀಡುತ್ತಿದೆ. ಆದರೂ ಸಹ ಈ ಸಮಸ್ಯೆಯನ್ನು ಹೋಗಲಾಡಿಸಲು ಬಹುದೂರದ ವರ್ಷಗಳೇ ಬೇಕಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಅಪೌಷ್ಟಿಕತೆಯ ಪ್ರಮಾಣ ಹೆಚ್ಚಾಗಿ ಕಾಡುತಿದ್ದು, ಇದರಿಂದ ಸಾಕಷ್ಟು ಅನಾರೋಗ್ಯದ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಶಿಣ, ಅನ್ನ ಹಾಗೂ ವಸತಿಗೆ ಮಾರ್ಗದರ್ಶನವೆಂದರೆ ಅದು ಸಿದ್ಧಗಂಗಾ ಮಠದ ಪರಮಪೂಜ್ಯರು. ಅವರು ನೀಡಿದಂತಹ ದಾಸೋಹದ ಮಾರ್ಗದರ್ಶನವೇ ಸರ್ಕಾರ ಇಂದಿನ ಅರ ದಾಸೋಹವಾಗಿ ಮಾಡಿದ್ದು, ಲಾಂತರ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಮೂಲಕ ಮಕ್ಕಳ ಹೊಟ್ಟೆ ತುಂಬುತ್ತಿದೆ ಎಂದರು.
ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳಿಗೆ ಈ ಸೌಲಭ್ಯವಿಲ್ಲ. ಇಂದಿಗೂ ಸಹ ಗ್ರಾಮೀಣ ಭಾಗದ ಮಕ್ಕಳು ಹೋಬಳಿ, ತಾಲೂಕು, ಜಿಲ್ಲಾಮಟ್ಟಗಳಿಗೆ ಆಗಮಿಸಿ ಶಿಣವನ್ನು ಪಡೆಯುತ್ತಿದ್ದಾರೆ. ಆ ಮಕ್ಕಳಿಗೆ ಮಧ್ಯಾಹ್ನದ ಊಟವಿಲ್ಲದೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಇದನ್ನ ಕಂಡಂತಹ ನಿಟ್ಟೂರಿನ ರೋಟರಿ ಕ್ಲಬ್ ಅನ್ನದಾಸೋಹ ಪ್ರಾರಂಭ ಮಾಡಿರುವುದು ನಿಜವಾಗಿಯೂ ಸಂತೋಷದ ವಿಷಯವಾಗಿದೆ. ಅವರ ಜತೆಯಲ್ಲಿ ಎಲ್ಲ ಸಂಗಳು ಸಹಕಾರವನ್ನು ನೀಡಬೇಕು. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕು. ಶಿಣಕ್ಕೆ ಹೆಚ್ಚಿನ ಆದ್ಯತೆ ನೀಡಿ ತಾವೆಲ್ಲರೂ ಬದುಕನ್ನ ಕಟ್ಟಿಕೊಳ್ಳಬೇಕಾಗಿದೆ ಎಂದರು.
ಇನ್ನು ಮಧ್ಯಾಹ್ನದ ಊಟವನ್ನು ನೀಡುತ್ತಿರುವುದರಿಂದ ಮಕ್ಕಳಲ್ಲಿ ಹಾಜರಾತಿ ಹೆಚ್ಚುತ್ತಿದೆ, ಶಿಣದಲ್ಲಿ ಆಸಕ್ತಿ ಹೆಚ್ಚುತ್ತಿದೆ. ಅಪೌಷ್ಟಿಕತೆ ಹೋಗಲಾಡಿಸಲು ಕೂಡ ಸಾಧ್ಯವಾಗಿದೆ. ಹಾಗಾಗಿ ನಿಟ್ಟೂರಿನಲ್ಲಿ ವಿನಾಯಕ ಕಾಲೇಜಿನಲ್ಲಿ ಮಾಡಿರುವ ಈ ಒಂದು ಯೋಜನೆ ಮಕ್ಕಳ ಶಿಣಕ್ಕೆ ಹಾಗೂ ಅವರ ಆರೋಗ್ಯಕ್ಕೆ ಅತ್ಯಂತ ಹೆಚ್ಚು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸಿದ್ದರಬೆಟ್ಟದ ಮಠಾಧ್ಯ ಶ್ರೀ ವೀರಭದ್ರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರೋಟರಿ ಸಂಸ್ಥೆಗೆ ನೂರಾರು ವರ್ಷಗಳ ಇತಿಹಾಸವಿದ್ದು, ಸಾಮಾಜಿಕವಾಗಿ ಮತ್ತು ಶೈಣಿಕವಾಗಿ ಹತ್ತಾರು ಕೆಲಸಗಳನ್ನ ನಿರಂತರವಾಗಿ ಮಾಡುತ್ತಾ ಬಂದಿದೆ. ನಿಟ್ಟೂರು ರೋಟರಿ ಸಂಸ್ಥೆ ಆರಂಭವಾಗಿ 10 ವರ್ಷಗಳ ಅವಧಿಯಲ್ಲಿ ಹಲವು ಯೋಜನೆಗಳನ್ನು ಮಾಡಿ ಯಶಸ್ಸು ಕಂಡಿದ್ದು, ಈಗ ವಿದ್ಯಾರ್ಥಿಗಳಿಗೆ ಅನ್ನದಾಸೋಹ ಮಾಡುತ್ತಿರುವುದು ನಿಜವಾಗಿಯೂ ವಿಶೇಷ ಯೋಜನೆ ಆಗಿದೆ. ನಮ್ಮ ಮಠದಿಂದಲೂ ಸಹ ಹೆಚ್ಚಿನ ಸಹಕಾರವನ್ನು ನಾವು ನೀಡುತ್ತೇವೆ ಎಂದು ತಿಳಿಸಿದರು.
ರೋಟರಿ ಸಂಸ್ಥೆಯ ಜಿಲ್ಲಾ ಪ್ರಾಂತಪಾಲ ಎಲಿಜಬೆತತ್ ಚೆರಿಯನ್ ಮಾತನಾಡಿ, ಬೆಂಗಳೂರಂತಹ ನಗರಗಳಲ್ಲಿ ನಾವು ಈಗಾಗಲೇ ಹಲವು ವರ್ಷಗಳಿಂದ ಈ ಯೋಜನೆ ಮಾಡಿದ್ದೇವೆ. ಆದರೆ ಗ್ರಾಮೀಣ ಭಾಗದ ಕಾಲೇಜುಗಳಲ್ಲಿ ಇಂತಹ ಯೋಜನೆ ಮಾಡಲು ಮುಂದಾಗಿರುವುದು ನಿಜವಾಗಿಯೂ ಅತ್ಯಂತ ಹೆಚ್ಚು ವಿಶೇಷ ಎನಿಸಿದ್ದು, ನಮ್ಮ ಸಂಸ್ಥೆಯಿಂದಲೂ ಹೆಚ್ಚಿನ ಸಹಕಾರ ಮಾಡುತ್ತೇವೆ ಎಂದು ತಿಳಿಸಿದರು.
ಸಹಾಯಕ ಪ್ರಾಂತಪಾಲ ಪ್ರಭುಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಉಮೇಶ್, ನಿಟ್ಟೂರು ಕ್ಲಬ್ ಅಧ್ಯ ಗುರುಮೂರ್ತಿ, ಕಾರ್ಯದರ್ಶಿ ಬಸವರಾಜು, ಕಾಲೇಜಿನ ಪ್ರಾಂಶುಪಾಲ ರಾಮದಾಸ್ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕಿನ ಅಧ್ಯರು, ಪದಾಧಿಕಾರಿಗಳು ಭಾಗವಹಿಸಿದ್ದರು.