ಮೈಸೂರಿನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಕೊಡಲು ವಿಶೇಷ ಉಡುಗೊರೆ ತಂದ ಬುಡಕಟ್ಟು ಜನರು

mysuru dasara
Published on

ಮೈಸೂರು: ಇನ್ನು ಕೆಲವೇ ಕ್ಷಣದಲ್ಲಿ ಮೈಸೂರು ದಸರಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಲನೆ ನೀಡಲಿದ್ದು, ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಕೋಟ್ಯಂತರ ಜನ ಕಾಯುತ್ತಿದ್ದಾರೆ.

ಮೈಸೂರಿಗೆ ದ್ರೌಪದಿ ಮುರ್ಮು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬುಡಕಟ್ಟು ಸಮುದಾಯದವರು ಸೋಮವಾರ ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ನೃತ್ಯ ಮಾಡಿ ಗಮನಸೆಳೆದರು.

ದಸರಾಗೆ ಚಾಲನೆ ನೀಡಿದ ಬಳಿಕ ಬುಡಕಟ್ಟು ಸಮುದಾಯದ ಆಯ್ದ 14 ಜನರೊಂದಿಗೆ ರಾಷ್ಟ್ರಪತಿಗಳ ಫೋಟೋ ಸೆಶನ್ ನಡೆಯಲಿದೆ. ಚಾಮುಂಡಿ ಬೆಟ್ಟದ ಆವರಣಲ್ಲಿ ಫೋಟೋ ಸೆಶನ್​ಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ರಾಷ್ಟ್ರಪತಿಗಳು 10 ನಿಮಿಷಗಳ ಕಾಲಾವಕಾಶ ಕೊಟ್ಟಿದ್ದಾರೆ. ಹುಣಸೂರು ಹಾಗೂ ಎಚ್.ಡಿ ಕೋಟೆಯ 14 ಜನರು ಪಾಲ್ಗೊಳ್ಳಲಿದ್ದಾರೆ.

ಇನ್ನು ರಾಷ್ಟ್ರಪತಿಗಳಿಗೆ ಬುಡಕಟ್ಟು ಜನರು ವಿಶೇಷ ಉಡುಗೊರೆ ಕೊಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ರೇಷ್ಮೆ ಸೀರೆ, ರಸಬಾಳೆ, ಮೈಸೂರು ಮಲ್ಲಿಗೆ, ಮೈಸೂರು ಪೇಟ, ಕಾಡಿನ ಜೇನನ್ನು ಕೊಡಲು ಆಗಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net