

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯವು 8 ಎಕ್ಸ್ಪ್ರೆಸ್ ರೈಲುಗಳನ್ನು ಸೂಪರ್ಫಾಸ್ಟ್ ರೈಲುಗಳನ್ನಾಗಿ ಬದಲಾಯಿಸಿದೆ.
ಯಶವಂತಪುರ-ಅಹ್ಮದಾಬಾದ್, ಅಹ್ಮದಾಬಾದ್-ಯಶವಂತಪುರ, ಮೈಸೂರು-ವಾರಾಣಸಿ, ವಾರಾಣಸಿ- ಮೈಸೂರು, ಮೈಸೂರು-ರೇಣಿಗುಂಟ, ರೇಣಿಗುಂಟ-ಮೈಸೂರು ಮೇಲ್ ಎಕ್ಸ್ಪ್ರೆಸ್ ರೈಲುಗಳು ಇದೇ ಅಕ್ಟೋಬರ್ನಿಂದ ಸೂಪರ್ಫಾಸ್ಟ್ ರೈಲುಗಳಾಗಿ ಸಂಚರಿಸುತ್ತಿವೆ. ಈ ರೈಲುಗಳು ಈ ಮೊದಲಿನ ಸಂಖ್ಯೆಗಳನ್ನು ಬದಲಾಯಿಸಿ, ಹೊಸ ಸಂಖ್ಯೆಗಳೊಂದಿಗೆ 2023ರ ಜನವರಿಯಿಂದ ಸಂಚರಿಸಲಿವೆ.
ಯಶವಂತಪುರ-ಹುಬ್ಬಳ್ಳಿ ಹಾಗೂ ಹುಬ್ಬಳ್ಳಿ -ಯಶವಂತಪುರ ಮೇಲ್ ಎಕ್ಸ್ಪ್ರೆಸ್ ರೈಲು ಕ್ರಮವಾಗಿ ಕಳೆದ ಆ.5 ಮತ್ತು 6ರಿಂದ ಸೂಪರ್ಫಾಸ್ಟ್ ರೈಲುಗಳಾಗಿ ಸಂಚಾರ ಪ್ರಾರಂಭಿಸಿವೆ. ಈ ರೈಲುಗಳು ಸಂಖ್ಯೆಗಳ ಬದಲಾವಣೆಯೊಂದಿಗೆ ಕ್ರಮವಾಗಿ ನ.18 ಮತ್ತು 19ರಂದು ಸಂಚಾರ ಪ್ರಾರಂಭಿಸಲಿವೆ. ಇನ್ನುಳಿದಂತೆ ಕೆಲ ರೈಲುಗಳ ಸಮಯವನ್ನು ಬದಲಾಯಿಸುವ ಮೂಲಕ ಅವುಗಳಿಗೆ ವೇಗ ನೀಡಲಾಗಿದೆ. ಆ ಮೂಲಕ ಒಟ್ಟು 54 ರೈಲುಗಳಿಗೆ ಇನ್ನಷ್ಟು ವೇಗ ಸಿಕ್ಕಿದೆ.