

ರಾಘವೇಂದ್ರ ಪೈ ಕುಂದಾಪುರ ಕುಂದಾಪುರ ನಗರದವನ್ನು ಬಾಧಿಸುತ್ತಿರುವ ಬಹುದೊಡ್ಡ ಸಮಸ್ಯೆ ಪಾಕಿರ್ಂಗ್‌ಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಪಾರ್ಕಿಂಗ್ ವಿಚಾರದಲ್ಲಿ ಅನೇಕ ವರ್ಷಗಳಿಂದ ಚರ್ಚೆಯಾಗುತ್ತಲೇ ಇದ್ದರೂ ಪರಿಹಾರ ವಾತ್ರ ನನೆಗುದಿಗೆ ಬಿದ್ದಿದೆ. ನಗರದಲ್ಲಿ ಹಲವು ಸರ್ಕಾರಿ ಕಚೇರಿಗಳಿವೆ. ಅಲ್ಲದೇ ಸಹಾಯಕ ಕಮಿಷನರ್ ಇಡೀ ಜಿಲ್ಲೆಗೆ ಒಬ್ಬರೇ ಆದ ಕಾರಣ ಜಿಲ್ಲೆಯ ಹಲವು ಭಾಗಗಳಿಂದ ಕೆಲಸ ಕಾರ್ಯಗಳಿಗೆ ನಿತ್ಯವೂ ನೂರಾರು ಮಂದಿ ಕುಂದಾಪುರಕ್ಕೆ ಬರುತ್ತಾರೆ. ಖಾಸಗಿ ವಾಹನಗಳಲ್ಲಿ ಆಗಮಿಸುವವರಿಗೆ ವಾಹನಗಳ ನಿಲುಗಡೆಗೆ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸಿ ಹೋಗುತ್ತಾರೆ. ಇದರಿಂದ ಸಂಚಾರಕ್ಕೂ ತೊಡಕುಂಟಾಗುತ್ತಿದೆ. ಇಷ್ಟು ಮಾತ್ರವಲ್ಲದೆ, ನಗರದಲ್ಲಿ ಪ್ರತಿಷ್ಠಿತ ಶಾಲಾ, ಕಾಲೇಜುಗಳು ಇರುವ ಕಾರಣ ನಿತ್ಯವೂ ಸಾವಿರಾರು ಮಕ್ಕಳು ಆಗಮಿಸುತ್ತಾರೆ. ಜತೆಗೆ ರಾಜ್ಯದ ಬೇರೆ ಬೇರೆ ಊರುಗಳಿಂದ ಮಕ್ಕಳ ಪಾಲಕರು ಆಗಮಿಸಿ ಕುಂದಾಪುರ ನಗರದಲ್ಲಿ ವಾಸ್ತವ್ಯ ಹೂಡುತ್ತಾರೆ. ಹೀಗಾಗಿ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಕಚೇರಿ ಸಮಯ, ಶುಭ ಸವಾರಂಭಗಳ ಸೀಸನ್, ಶಾಲಾ ಕಾಲೇಜು ದಾಖಲಾತಿ ಸಂದರ್ಭದಲ್ಲಿ ಇಲ್ಲಿ ಜನದಟ್ಟಣೆಯ ಜತೆಗೆ ವಾಹನ ದಟ್ಟಣೆಯೂ ಹೆಚ್ಚಿರುತ್ತದೆ. ಸಮಸ್ಯೆ ನಿವಾರಣೆಗೆ ಸರ್ವೇ ಕಾರ್ಯ: ನಗರದಲ್ಲಿ ಅನೇಕ ಮಳಿಗೆಯವರು ಪುರಸಭೆ ಜಾಗದಲ್ಲೂ ಸಾರ್ವಜನಿಕ ವಾಹನ ನಿಲುಗಡೆಗೆ ಆಕ್ಷೇಪ ಎತ್ತುತ್ತಾರೆ. ಇದನ್ನು ಗಮನಿಸಿದ ಪುರಸಭೆ ಸದಸ್ಯರು ಸಾವಾನ್ಯ ಸಭೆಗಳಲ್ಲಿ ಅನೇಕ ಬಾರಿ ಈ ಬಗ್ಗೆ ಚರ್ಚಿಸಿ ನಗರದಲ್ಲಿ ಎಲ್ಲೆಲ್ಲಿ ವಾಹನ ನಿಲುಗಡೆ ವಾಡಬಹುದು ಎಂದು ಸರ್ವೇ ನಡೆದಿದೆ. ಸರ್ವೇ ನಡೆದು ಅನೇಕ ವರ್ಷಗಳ ಬಳಿಕ ಪುರಸಭೆಯಲ್ಲಿ ಮತ್ತೆ ಪ್ರಸ್ತಾಪಗೊಂಡು, ಚರ್ಚೆ ನಡೆದು ಮತ್ತೊಮ್ಮೆ ಪಟ್ಟಿ ಸಿದ್ಧವಾಗಿದೆ. ಅದರಲ್ಲಿ ಆಕ್ಷೇಪಾರ್ಹ ಜಾಗಗಳನ್ನು ಬದಿಗಿಟ್ಟು ಅಂತಿಮ ಪಟ್ಟಿ ಇನ್ನೂ ಸಿದ್ಧವಾಗಿಲ್ಲ. ಅಂತಿಮ ಪಟ್ಟಿ ಪೊಲೀಸರ ಮೂಲಕ ಪುರಸಭೆಗೆ ಬಂದು ಜಿಲ್ಲಾಧಿಕಾರಿ ಮೂಲಕ ಗಜೆಟ್ ನೋಟಿಫಿಕೇಶನ್ ಆಗಬೇಕು. ಈ ಪ್ರಕ್ರಿಯೆ ಇನ್ನೂ ನಡೆದಿಲ್ಲ. ಸದಸ್ಯರು ಆಗಾಗ ಪುರಸಭೆ ಸಾವಾನ್ಯ ಸಭೆಗಳಲ್ಲಿ ಪ್ರಸ್ತಾವಿಸುತ್ತಾರೆಯೇ ವಿನಾ ಪರಿಹಾರ ಮಾತ್ರ ಮರೀಚಿಕೆಯಾಗಿದೆ. ್ಲೈಓವರ್ ಕೆಳಗೆ ದ್ವಿಚಕ್ರ ವಾಹನ ಪಾಕಿರ್ಂಗ್ ವಾಡಲು ಕಾನೂನಾತ್ಮಕ ತೊಡಕು ಇದೆ ಎಂದು ಹೆದ್ದಾರಿ ಇಲಾಖೆ ಹೇಳುತ್ತಿದ್ದು, ಹಾಗಾಗಿ ಅದೂ ಬಾಕಿ ಆಗಿದೆ. ಒಟ್ಟಿನಲ್ಲಿ ಕುಂದಾಪುರ ನಗರದ ಸಮಸ್ಯೆ ಬಗೆಹರಿಸಲು ಯಾವ ಕ್ರಮ ಕೈಗೊಳ್ಳಬೇಕೆಂದು ಜನಪ್ರತಿನಿಧಿಗಳೂ ಗೊಂದಲದಲ್ಲಿದ್ದಾರೆ.
ಕುಂದಾಪುರ ನಗರದ ಸಂಚಾರ ಸಮಸ್ಯೆ ಹಾಗೂ ಪಾರ್ಕಿಂಗ್ ಸಮಸ್ಯೆ ಬಗ್ಗೆ ಅನೇಕ ಬಾರಿ ಚರ್ಚೆ ನಡೆದಿದೆ. ಆದರೆ ಯಾವುದೂ ಈವರೆಗೆ ಸರಿಯಾಗಿ ಆಗಿಲ್ಲ. ಸಂಚಾರ ಸಮಸ್ಯೆ ಕುರಿತು ಚರ್ಚಿಸಲು ವಿಶೇಷ ಸಭೆ ಕರೆಯಲಾಗಿದೆ. ಅದರಲ್ಲಿ ತೀರ್ವಾನ ಕೈಗೊಳ್ಳಲಾಗುವುದು. ಮೋಹನದಾಸ ಶೆಣೈ, ಕುಂದಾಪುರ ಪುರಸಭೆ ಅಧ್ಯಕ್ಷ https://www.vijayavani.net/beautiful-and-clean-tree-campaign-launched https://www.vijayavani.net/let-children-focus-on-acquiring-knowledge